ಸರ್ಕಾರಿ ಸ್ವಾಮ್ಯದ ಐಒಸಿಯಿಂದ ಡೀಸೆಲ್ ಹೋಮ್ ಡೆಲಿವರಿ!

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ ಸಂಸ್ಥೆ ಡೀಸೆಲ್ ನ್ನು ಹೋಮ್ ಡೆಲಿವರಿ ನೀಡಲು ನಿರ್ಧರಿಸಿದೆ.
ಐಒಸಿ
ಐಒಸಿ
ಪುಣೆ:ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ ಸಂಸ್ಥೆ ಡೀಸೆಲ್ ನ್ನು ಹೋಮ್ ಡೆಲಿವರಿ ನೀಡಲು ನಿರ್ಧರಿಸಿದೆ. 
ಪ್ರಾರಂಭಿಕ ಹಂತದಲ್ಲಿ ಪುಣೆಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವಿಸ್ತರಿಸುವುದಾಗಿ ಐಒಸಿಯ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ. ಪೆಟ್ರೋಲ್ ಪಂಪ್ ಗಳಲ್ಲಿ ಕಾಣುವ ಡೀಸೆಲ್ ಡಿಸ್ಪೆನ್ಸರ್ ನ್ನು ಟ್ರಕ್ ಮೇಲಿರಿಸಿ ಹೋಮ್ ಡೆಲಿವರಿ ನೀಡಲಾಗುತ್ತದೆ. 
ಈ ಪ್ರಕ್ರಿಯೆಗಾಗಿ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ(ಪಿಇಎಸ್ಒ) ದಿಂದ ಅನುಮತಿ ಪಡೆದ ನಂತರ ಹೋಮ್ ಡೆಲಿವರಿ ಪ್ರಾರಂಭಿಸಿದ್ದು, ಡೀಸೆಲ್ ಮಾದರಿಯಲ್ಲೇ ಪೆಟ್ರೋಲ್ ನ್ನೂ ಶೀಘ್ರವೇ ಹೋಮ್ ಡೆಲಿವರಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಶಾಪಿಂಗ್ ಮಾಲ್, ವಾಣಿಜ್ಯ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಉದ್ದೇಶಗಳಿಗಾಗಿ, ಬೃಹತ್ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ನ್ನು ಕೊಂಡೊಯ್ದು ನೀಡಲಾಗುತ್ತದೆ ಎಂದು ಐಒಸಿ ಮಾಹಿತಿ ನೀಡಿದೆ. 
ಐಒಸಿ ಮಾದರಿಯಲ್ಲೇ ಹಿಂದೂಸ್ಥಾನ್ ಪೆಟ್ರೋಲಿಯಮ್ ಕಾರ್ಪ್, ಭಾರತ್ ಪೆಟ್ರೋಲೊಯಂ ಗೂ ಡೀಸೆಲ್ ಹೋಮ್ ಡೆಲಿವರಿಗೆ ಅನುಮತಿ ದೊರೆತಿದ್ದು, ಆ ಸಂಸ್ಥೆಗಳೂ ಶೀಘ್ರವೇ  ಡೀಸೆಲ್ ಹೋಮ್ ಡೆಲಿವರಿ ಪ್ರಾರಂಭಿಸಲಿವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com