ವೊಡಾಫೋನ್-ಐಡಿಯಾ ವಿಲೀನ ಸಂಸ್ಥೆಯ ಅಧ್ಯಕ್ಷರಾಗಿ ಕುಮಾರ್ ಮಂಗಲಂ ಬಿರ್ಲಾ ಆಯ್ಕೆ

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಗ್ರೂಪ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿಗಳು...
ಕುಮಾರ್ ಮಂಗಲಂ ಬಿರ್ಲಾ - ವೊಡಾಫೋನ್ ಸಿಇಒ ವಿಟೊರಿಯೋ ಕೊಲಾವೋ
ಕುಮಾರ್ ಮಂಗಲಂ ಬಿರ್ಲಾ - ವೊಡಾಫೋನ್ ಸಿಇಒ ವಿಟೊರಿಯೋ ಕೊಲಾವೋ
ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಗ್ರೂಪ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿಗಳು ವಿಲೀನವಾಗಲಿದ್ದು, ಐಡಿಯಾ ಮಾಲಿಕ ಹಾಗೂ ಖ್ಯಾತ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರು ಹೊಸ ಸಂಸ್ಥೆಯ ಅಧ್ಯಕ್ಷರಾಗಲಿದ್ದಾರೆ.
ವಿಲೀನ ಸಂಸ್ಥೆಯ ಮುಖ್ಯಸ್ಥರನ್ನು ಇಂದು ಘೋಷಿಸಲಾಗಿದ್ದು, ಬಾಲೇಶ್ ಶರ್ಮಾ(ಸದ್ಯ ವೊಡಾಫೋನ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ) ಅವರು ಸಿಇಒ ಆಗಿ ನೇಮಕಗೊಂಡಿದ್ದಾರೆ ಎಂದು ಐಡಿಯಾ ಸೆಲ್ಯುಲಾರ್ ಹೇಳಿದೆ.
ಶರ್ಮಾ ಅವರು ವಿಲೀನ ಸಂಸ್ಥೆಯ ಸಂಯೋಜಿತ ವ್ಯಾಪಾರ ತಂತ್ರ ಮತ್ತು ಅದರ ಜಾರಿ ಹಾಗೂ ಚಾಲನೆಯ ಜವಾಬ್ದಾರಿ ನಿರ್ವಹಿಸಲಿದ್ದಾರೆ. 
ಬ್ರಿಟನ್ನಿನ ದೂರಸಂಪರ್ಕ ಸಂಸ್ಥೆ ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹದ ಮೊಬೈಲ್‌ ಸೇವಾ ಸಂಸ್ಥೆ ಐಡಿಯಾ ಸೆಲ್ಯುಲರ್‌  ವಿಲೀನಗೊಳ್ಳಲಿವೆ ಎಂದು 2017ರಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿತ್ತು.
ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ವಿಲೀನದಿಂದಾಗಿ, ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು  ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ  ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್‌ ಸಂಸ್ಥೆ ಏರ್‌ಟೆಲ್‌ ಅನ್ನು ಹಿಂದಿಕ್ಕಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com