ಹಣಕಾಸು ವರ್ಷ ಅಂತ್ಯ ಹಿನ್ನೆಲೆ, ಈ ವಾರಾಂತ್ಯ ಆದಾಯ ತೆರಿಗೆ ಕಛೇರಿಗಳಿಗೆ ರಜೆ ಇಲ್ಲ

ಪ್ರಸಕ್ತ ಹಣಕಾಸು ವರ್ಶದ ಅಂತ್ಯಕ್ಕೆ ಮುನ್ನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ದೇಶಾದ್ಯಂತದ ಎಲ್ಲಾ ಆದಾಯ ತೆರಿಗೆ ಕಚೇರಿಗಳು ..........
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಸಕ್ತ ಹಣಕಾಸು ವರ್ಶದ ಅಂತ್ಯಕ್ಕೆ ಮುನ್ನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ದೇಶಾದ್ಯಂತದ ಎಲ್ಲಾ ಆದಾಯ ತೆರಿಗೆ ಕಛೇರಿಗಳು ಮತ್ತು ಅಯಕಾರ್ ಸೇವಾ ಕೇಂದ್ರಗಳು (ಎ ಎಸ್ ಕೆ) ಮಾರ್ಚ್ 29 ರಿಂದ 31 ರವರೆಗೆ ತೆರೆದಿರಲಿದೆ.
ಅಸೆಸ್ಮೆಂಟ್ ಇಯರ್  2016-17 ಮತ್ತು 2017-18ರ ಗಡುವು ಮೀರಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31, 2018 ಆಗಿದೆ.
"ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮತ್ತು ಸಂಬಂಧಿತ ಕೆಲಸ ಪೂರ್ಣಗೊಳಿಸಲು ಅನುಕೂಲವಾಗುವಂತೆ, ಭಾರತದಾದ್ಯಂತ ಎಲ್ಲಾ ಆದಾಯ ತೆರಿಗೆ ಕಛೇರಿಗಳು ಮಾರ್ಚ್ 29-31, 2018ರವರೆಗೆ ತೆರೆದಿರಲಿದೆ" ಎಂದು ಹಣಕಾಸು ಸಚಿವಾಲಯ ಹೇಳಿದೆ.
ಮಾರ್ಚ್ 29 ಮತ್ತು ಮಾರ್ಚ್ 30 ರಂದು ಮಹಾವೀರ ಜಯಂತಿ ಹಾಗೂ ಗುಡ್ ಫ್ರೈಡೆ ಆಗಿದ್ದು ಎಲ್ಲಾ ಸರ್ಕಾರಿ ಕಛೇರಿಗಳು, ಬ್ಯಾಂಕುಗಳಿಗೆ ರಜಾ ಇರಲಿದೆ. ಮಾರ್ಚ್ 31, 2017-18 ಹಣಕಾಸು ವರ್ಷದ ಕಡೆಯ ದಿನವಾಗಿದ್ದು ಅಂದು ಶನಿವಾರವಾಗಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com