ಸಂಸ್ಥೆಯ ಆಡಳಿತ ಮತ್ತು ಉದ್ಯೋಗಿಗಳು ನೇರವಾಗಿ ಅಥವಾ ಒಕ್ಕೂಟ ರಚನೆ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಈ ಕಾರ್ಯತಂತ್ರದ ಹೂಡಿಕೆಯ ಪ್ರಕ್ರಿಯೆಗೆ ವ್ಯವಹಾರ ಸಲಹೆಗಾರರಾಗಿ ಆರ್ನೆಸ್ಟ್ ಅಂಡ್ ಯಂಗ್, ಎಲ್ ಎಲ್ ಪಿ ಇಂಡಿಯಾಗಳನ್ನು ನೇಮಕ ಮಾಡಲಾಗಿದೆ. ಏರ್ ಇಂಡಿಯಾದ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಏರ್ ಇಂಡಿಯಾ ಎಸ್ಎಟಿಎಸ್ ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಈ ವ್ಯವಹಾರದಲ್ಲಿ ಭಾಗವಹಿಸಲಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಹೇಳಿದೆ.