ಕೃಷಿಭೂಮಿ ಉತ್ತಮ ಹೂಡಿಕೆಯಾಗಿರಬಹುದು, ಆದರೆ ಹುಷಾರಾಗಿರಿ !

ಕೃಷಿ ಭೂಮಿ ಕೊಂಡುಕೊಳ್ಳುವ ಮುನ್ನ ಹುಷಾರಾಗಿರಬೇಕಾಗುತ್ತದೆ. ಕೆಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್ : ಸ್ವಂತ ಕೃಷಿ ಭೂಮಿ ಹೊಂದಿರಬೇಕೆಂಬುದು ಅನೇಕರ ಬಯಕೆ. ಕೃಷಿ ಬೇಸಾಯಕ್ಕಾಗಿ ಮಾತ್ರವಲ್ಲದೇ, ವಾರಾಂತ್ಯದಲ್ಲಿ ಹೊರಬರಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ಕೃಷಿ ಭೂಮಿ ಕೊಂಡುಕೊಳ್ಳುವ ಮುನ್ನ ಹುಷಾರಾಗಿರಬೇಕಾಗುತ್ತದೆ. ಕೆಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

 ಸ್ವಂತ ಕೃಷಿ ಭೂಮಿ ಹೊಂದುವುದರಿಂದ ಅನುಕೂಲವಿದೆ.  ಕೃಷಿಯಿಂದ ಆದಾಯ ಪಡೆಯಬಹುದು ಮತ್ತು ಮಾರಾಟದ ಸಂದರ್ಭದಲ್ಲಿ ತೆರಿಗೆಯಿಂದಲೂ ವಿನಾಯಿತಿ ಪಡೆದುಕೊಳ್ಳಬಹುದು.

 ಆದರೆ, ಕೃಷಿಗೆ ಸಂಬಂಧಿಸಿದ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ.  ತೆಲಂಗಾಣದಂತಹ ರಾಜ್ಯಗಳಲ್ಲಿ ಅವರು ರೈತರಾಗಿರಲಿ, ಅಥವಾ ಬೇರೆಯವರಾಗಿರಲೀ ಕೃಷಿ ಭೂಮಿ ಕೊಂಡುಕೊಳ್ಳಬಹುದು. ಆದರೆ, ಕರ್ನಾಟಕದಲ್ಲಿ ನೋಂದಣಿಯಾಗಿರುವ ಕೃಷಿಕರು ಅಥವಾ ಕೃಷಿ ಬೇಸಾಯ ಮಾಡುತ್ತಿರುವವರು ಮಾತ್ರ ಅಂತಹ ಭೂಮಿಯನ್ನು  ಕೊಂಡುಕೊಳ್ಳುತ್ತಾರೆ.

 ಆದ್ದರಿಂದ ಕೃಷಿ ಭೂಮಿ ಕೊಂಡುಕೊಳ್ಳುವ ಮುನ್ನ ಆ ರಾಜ್ಯದಲ್ಲಿರುವ ನಿಯಮಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಕೃಷಿ ಭೂಮಿಯ ಮಾರಾಟ ಬೆಲೆಯೂ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

 ಅಂತಹ ಭೂಮಿ ಮಾರಾಟದಲ್ಲಿ ಎಷ್ಟು ಆದಾಯ ಗಳಿಸಬಹುದು, ಗುತ್ತಿಗೆಗೆ ಪಡೆಯಬೇಕೆ ಅಥವಾ ಬಾಡಿಗೆಗೆ ಪಡೆಯಬೇಕೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ತೆಲಂಗಾಣದ ಭಾರತೀಯ  ರಿಯಲ್ ಎಸ್ಟೇಟ್ ಡವಲಪರ್ಸ್  ಅಸೋಸಿಯೇಷನ್   ಒಕ್ಕೂಟದ ಅಧ್ಯಕ್ಷ ರಾಮ್ ರೆಡ್ಡಿ ಗುಮ್ಮಿ ಹೇಳುತ್ತಾರೆ.

ಕೃಷಿ ಬೇಸಾಯ ಅಷ್ಟು ಸುಲಭದ ಕೆಲಸವಲ್ಲಾ, ಕೃಷಿ ಭೂಮಿಗೆ ಸಂಬಂಧಿಸಿದ  ಕಾನೂನು ನಿಯಮಗಳು  ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಗುಮ್ಮಿ ಸಲಹೆ ನೀಡುತ್ತಾರೆ.

 ಹೆಚ್ಚಿನ ಆದಾಯ ಹೊಂದಿರುವವರು ಕೃಷಿ ಭೂಮಿ ಖರೀದಿಸುವುದರಿಂದ ಉತ್ತಮ ಹೂಡಿಕೆಯನ್ನು ಮಾಡಬಹುದು ಎಂದು ಹಿರಿಯ ಹಣಕಾಸು ಸಲಹೆಗಾರ ಸುಬ್ಬಾ ರಾವ್ ಅನುಪಿಂಡಿ ಹೇಳುತ್ತಾರೆ. ಆದರೆ, ಕೃಷಿ ಭೂಮಿ ಕೊಂಡುಕೊಳ್ಳುವುದು ಕಷ್ಟಕರದ ಕೆಲಸ ಎನ್ನುತ್ತಾರೆ.
 ನಗರಗಳಲ್ಲಿ ವಾಸಿಸುತ್ತಿರುವ ಸಂಬಳದಾರರು ಅಥವಾ ಸ್ವಯಂ ಉದ್ಯೋಗಿಗಳು ನಿಗದಿತ ಸಮಯದೊಳಗೆ  ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಆದ್ದರಿಂದ ಕೃಷಿ ಭೂಮಿ ಕೊಂಡುಕೊಳ್ಳುವ ಮುನ್ನ ಹೂಡಿಕೆದಾರರು ಎಲ್ಲಾ ಪ್ರಾಯೋಗಿಕ ಅಂಶಗಳನ್ನು ತಲೆಯಲ್ಲಿಟ್ಟುಕೊಂಡಿರಬೇಕೆಂದು ಅವರು ಸಲಹೆ ನೀಡುತ್ತಾರೆ.

 ಕೃಷಿ ಭೂಮಿ ಕೊಂಡುಕೊಳ್ಳುವ ಮುನ್ನ ಈ ಕೆಳಗಿನ ಕೆಲ ಸಲಹೆಗಳನ್ನು ಪಾಲಿಸಿ

 *  ಸ್ವಂತ ಕೃಷಿಭೂಮಿಯಿಂದ ಏನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಸ್ಪಷ್ಪ ಮಾಡಿಕೊಳ್ಳಬೇಕು

*ಕೊಂಡುಕೊಳ್ಳುವ ಭೂಮಿಗೆ ಸ್ಪಷ್ಟ ದಾಖಲೆ  ಇದೆಯೇ ಎಂಬುದನ್ನು  ಖಚಿತಪಡಿಸಿಕೊಳ್ಳಿ

*ಮಾರಾಟಗಾರನ ಪೂರ್ವಸಿದ್ಧತೆಯನ್ನು ಪರಿಶೀಲಿಸಿ

* ಭೂಮಿಯ ದಾಖಲೆ ಬಗ್ಗೆ ಕಂದಾಯ ಮತ್ತು ನೋಂದಣಿ ಇಲಾಖೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ವಿಚಾರಣೆ ನಡೆಸಿ

* ಕೃಷಿ ಭೂಮಿಯ ಹಿಂದಿನ ಮಾಲೀಕರು ಮತ್ತು ಭೂಮಿಯ ನೋಂದಣಿ ಬಗ್ಗೆ  ಇರುವ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಿ

* ಕೃಷಿಭೂಮಿಗೆ ಸಂಬಂಧಿಸಿದಂತೆ ಆ ರಾಜ್ಯದಲ್ಲಿರುವ ನಿಯಮಗಳನ್ನು ಅರಿತಿರಬೇಕಾಗುತ್ತದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com