ಫ್ಲಿಪ್​ಕಾರ್ಟ್ ಖರೀದಿಗೆ ವಾಲ್ಮಾರ್ಟ್ ಸಿದ್ದ: ಸಾಫ್ಟ್ ಬ್ಯಾಂಕ್ ಸಿಇಒ ಮಸಾಯೋಶಿ ಸನ್ ದೃಢೀಕರಣ

ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್ಮಾರ್ಟ್ ಭಾರತದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ನ ಬಹುಪಾಲು ಶೇರನ್ನು ಖರೀದಿಆಲಿದೆ....
ಫ್ಲಿಪ್​ಕಾರ್ಟ್
ಫ್ಲಿಪ್​ಕಾರ್ಟ್
ಟೋಕಿಯೋ: ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್ಮಾರ್ಟ್  ಭಾರತದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ನ ಬಹುಪಾಲು ಶೇರನ್ನು ಖರೀದಿಆಲಿದೆ ಎಂದು ಭಾರತದ ಪ್ರಮುಖ ಸ್ಟಾಕ್ ಕಂಪನಿ ಸಾಫ್ಟ್ ಬ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.
"ಕಳೆದ ರಾತ್ರಿ ಇವರು ಅಂತಿಮ ಸುತ್ತಿನ ಒಪ್ಪಂದ ಮಾಡಿಕೊಂಡಿದ್ದಾರೆ. ಫ್ಲಿಪ್ ಕಾರ್ಟ್,ನ ಬಹುಪಾಲನ್ನು ಅಮೆರಿಕಾದ ವಾಲ್ಮಾರ್ಟ್ ಸಂಸ್ಥೆ ಕರೀದಿಸಲು ಮುಂದಾಗಿದೆ" ಎಂದು ಸಾಫ್ಟ್ ಬ್ಯಾಂಕ್ ನ ಮುಖ್ಯ ಸಿಇಒ ಮಾಸಯೋಶಿ ಸನ್ ಹೇಳಿದ್ದಾರೆ.
ಫ್ಲಿಪ್ ಕಾರ್ಟ್ ನ ಶೇ.70ರಷ್ಟು ಪಾಲು ವಾಲ್ಮಾರ್ಟ್ ಪಾಲಾಗಲಿದೆ.  ಇದು ಜಗತ್ತಿನ ಅತಿ ದೊಡ್ಡ ಇ-ಕಾಮರ್ಸ್ ಸ್ವಾಧೀನ ಪ್ರಕ್ರಿಯೆಗಳಲ್ಲಿ ಒಂದಾಗಲಿದೆ. ಆನ್ ಲೈನ್ ಮಾರುಕಟ್ಟೆ ದಿಗ್ಗಜ ಅಮೇಜಾನ್ ಗೆ  ಸೆಡ್ಡು  ಹೊಡೆಯುವ ಸಲುವಾಗಿ ವಾಲ್ಮಾರ್ಟ್ ಫ್ಲಿಪ್ ಕಾರ್ಟ್ ಖರೀದಿಗೆ ಮುಂದಾಗಿದೆಯೆಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2013ರಲ್ಲಿ ಬಾರತದಲ್ಲಿ ಫ್ಲಿಪ್ ಕಾರ್ಟ್ ಪ್ರಾರಂಭವಾದಂದಿನಿಂದಲೂ ಅತ್ಯಂತ ವೇಗವಾಗಿ ವೃದ್ದಿ ಹೊಂದುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತ್ತಿದೆ.
ವಾಲ್ಮಾರ್ಟ್ ನೊಂದಿಗಿನ ಪ್ರಸ್ತುತ ಒಪ್ಪಂದದಲ್ಲಿ ಫ್ಲಿಪ್ ಕಾರ್ಟ್ ಕನಿಷ್ಟ 20 ಬಿಲಿಯನ್​ ಡಾಲರ್​​ ಮೌಲ್ಯವನ್ನು ನಿರೀಕ್ಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com