ಸಚಿನ್ ಬನ್ಸಲ್
ಸಚಿನ್ ಬನ್ಸಲ್

ಫ್ಲಿಪ್ ಕಾರ್ಟ್ ನಿಂದ ಸಚಿನ್ ಬನ್ಸಲ್ ನಿರ್ಗಮನ; ಫೇಸ್ ಬುಕ್ ನಲ್ಲಿ ಭಾವಪೂರ್ಣ ವಿದಾಯ

ಬೆಂಗಳೂರು ಮೂಲದ ಕಂಪೆನಿ ಫ್ಲಿಪ್ ಕಾರ್ಟ್ ನಿಂದ ಅದರ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ...

ನವದೆಹಲಿ: ಬೆಂಗಳೂರು ಮೂಲದ ಕಂಪೆನಿ ಫ್ಲಿಪ್ ಕಾರ್ಟ್ ನಿಂದ ಅದರ ಸಹ ಸಂಸ್ಥಾಪಕ ಸಚಿನ್ ಬನ್ಸಲ್ ನಿರ್ಗಮಿಸುತ್ತಿದ್ದು, ತಮ್ಮ ವೈಯಕ್ತಿಕ ಪ್ರಾಜೆಕ್ಟ್ಸ್ ಗಳನ್ನು ಮುಗಿಸಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳ ಆಟಿಕೆ ಉದ್ಯಮ ಮತ್ತು ಸಂಕೇತ ಕೌಶಲ್ಯ ಉದ್ಯಮ ಆರಂಭಕ್ಕೆ ತಮ್ಮ ಮೂಲ ದಿನಗಳ ಕಡೆಗೆ ಒಲವು ತೋರುತ್ತಿದ್ದಾರೆ.

ಅಮೆರಿಕಾ ಮೂಲದ ರಿಟೈಲರ್ ವಾಲ್ ಮಾರ್ಟ್ ಇಂಕ್ ನಿನ್ನೆ ಶೇಕಡಾ 77ರಷ್ಟು ಷೇರನ್ನು ಫ್ಲಿಪ್ ಕಾರ್ಟ್ ನಿಂದ 16 ಶತಕೋಟಿ ಡಾಲರ್ ಗೆ ಪಡೆದಿದೆ. ಇದುವರೆಗಿನ ಒಪ್ಪಂದದಲ್ಲಿ ಇದು ಅತಿ ಹೆಚ್ಚಿನದ್ದಾಗಿದೆ. ಒಪ್ಪಂದದ ಬೆಲೆ 11 ವರ್ಷ ಭಾರತೀಯ ಇ-ವಾಣಿಜ್ಯ ಘಟಕದ 20.8 ಶತಕೋಟಿ ಡಾಲರ್ ನಷ್ಟಾಗಿದೆ.

2007ರಲ್ಲಿ ಬಿನ್ನಿ ಬನ್ಸಲ್ ಜೊತೆಗೆ ಫ್ಲಿಪ್ ಕಾರ್ಟ್ ನ್ನು ಸ್ಥಾಪಿಸಿದ್ದ ಸಚಿನ್ ಬನ್ಸಲ್ ಒಪ್ಪಂದದ ನಂತರ ಕಂಪೆನಿ ತೊರೆದಿದ್ದಾರೆ.

ಸಚಿನ್ ಮತ್ತು ಬಿನ್ನಿ ಈ ಮೊದಲು ಅಮೆಜಾನ್.ಕಾಮ್ ಇಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಫ್ಲಿಪ್ ಕಾರ್ಟ್ ವಿಶ್ವದ ಅತಿದೊಡ್ಡ ಇ-ವಾಣಿಜ್ಯ ಒಪ್ಪಂದವನ್ನು ನಿನ್ನೆ ವಾಲ್ ಮಾರ್ಟ್ ಜೊತೆಗೆ ಮಾಡಿಕೊಂಡಿದೆ.ಈ ಮೂಲಕ ಭಾರತವನ್ನು ವಿಶ್ವದ ಇ-ಕಾಮರ್ಸ್ ಉದ್ಯಮಗಳಲ್ಲಿ ಗಮನ ಸೆಳೆಯುವಂತೆ ಮಾಡಿದೆ.

ನಾನು ಸ್ವಲ್ಪ ಸಮಯ ಸುದೀರ್ಘ ರಜೆ ತೆಗೆದುಕೊಳ್ಳುತ್ತಿದ್ದು ಕೆಲವು ವೈಯಕ್ತಿಕ ಪ್ರಾಜೆಕ್ಟ್ ಗಳನ್ನು ಮುಗಿಸಲು ಗಮನ ಹರಿಸಲಿದ್ದೇನೆ. ಅದಕ್ಕೆ ನನಗೆ ಈವರೆಗೆ ಸಮಯ ಸಿಗುತ್ತಿರಲಿಲ್ಲ. ಮಕ್ಕಳ ಆಟಿಕೆ ಉದ್ಯಮದ ಕಡೆಗೆ ಒಲವು ತೋರುತ್ತಿದ್ದೇನೆ ಎಂದು ಬನ್ಸಲ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಫ್ಲಿಪ್ ಕಾರ್ಟ್ ಜೊತೆಗೆ ನನ್ನ ಕೆಲಸ ಇಲ್ಲಿಗೆ ಮುಕ್ತಾಯವಾಗುತ್ತಿದ್ದು 10 ವರ್ಷಗಳ ನಂತರ ನನ್ನ ಕೆಲಸವನ್ನು ಬೇರೆಯವರಿಗೆ ವಹಿಸಿ ಇಲ್ಲಿಂದ ನಿರ್ಗಮಿಸುವ ಸಮಯ. ಆದರೂ ಹೊರಗಿದ್ದುಕೊಂಡು ಫ್ಲಿಪ್ ಕಾರ್ಟ್ ತಂಡಕ್ಕೆ ಅದರ ಅಭಿವೃದ್ಧಿಗೆ ಬೆಂಬಲಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com