ಕೇಂದ್ರದ ನಡೆಗೆ ಹೆದರಿ ಬ್ಯಾಂಕುಗಳಿಗೆ 83,000 ಕೋಟಿ ರು. ಬಾಕಿ ಪಾವತಿಸಿದ 2,100 ಕಂಪನಿಗಳು!

ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪರಿಣಾಮಕ್ಕೆ ಹೆದರಿದ ವಿವಿಧ ಕಂಪನಿಗಳ ಪ್ರವರ್ತಕರು ತಾವು ಬಾಕಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪರಿಣಾಮಕ್ಕೆ ಹೆದರಿದ ವಿವಿಧ ಕಂಪನಿಗಳ ಪ್ರವರ್ತಕರು ತಾವು ಬಾಕಿ ಉಳಿಸಿಕೊಂಡಿದ್ದ 83,000 ಕೋಟಿ ರುಪಾಯಿಯನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ. 
ಕೇಂದ್ರ ಸರ್ಕಾರ ನಡೆಗೆ ಹೆದರಿದ ಸುಮಾರು 2100ಕ್ಕೂ ಹೆಚ್ಚು ಕಂಪನಿಗಳು 83 ಸಾವಿರ ಕೋಟಿ ರುಪಾಯಿ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿವೆ. ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2100ಕ್ಕೂ ಹೆಚ್ಚು ಕಂಪನಿಗಳು ಹಳೆಯ ಬ್ಯಾಂಕ್ ಬಾಕಿಯನ್ನು ಪಾವತಿಸಿವೆ. 
ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪ್ರಕಾರ 90 ದಿನಗಳ ಕಾಲ ಪಾವತಿಯಾಗದೆ ಉಳಿದ ಸಾಲವನ್ನು ಅನುತ್ಪಾದಕ ಸ್ವತ್ತು ಎಂದು ವರ್ಗಿಕರಿಸಲಾಗುತ್ತದೆ. ನಂತರ ಮಾಲೀಕರು ಅಥವಾ ಹೂಡಿಕೆದಾರರು ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com