ನೀರವ್ ಮೊಡಿ
ನೀರವ್ ಮೊಡಿ

ಪಿಎನ್ಬಿ ವಂಚನೆ: ನೀರವ್ ಮೋದಿ, ಸಹವರ್ತಿಗಳ ವಿರುದ್ಧ ಇಡಿಯಿಂದ ಮೊದಲ ಚಾರ್ಜ್ ಶೀಟ್ ಸಲ್ಲಿಕೆ

ಎರಡು ಬಿಲಿಯನ್ ಡಾಲರ್ ಮೊತ್ತರ ಪಿಎನ್ಬಿ ಹಗರಣಕ್ಕೆ ಸಂಬಂಧಿಸಿ ಇಡಿ ಇಂದು ನೀರವ್ ಮೋದಿ ವಿರುದ್ಧ ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿದೆ.
ಮುಂಬೈ: ಎರಡು ಬಿಲಿಯನ್ ಡಾಲರ್ ಮೊತ್ತರ ಪಿಎನ್ಬಿ ಹಗರಣಕ್ಕೆ ಸಂಬಂಧಿಸಿ ಇಡಿ ಇಂದು ನೀರವ್ ಮೋದಿ ವಿರುದ್ಧ ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)  ವಿವಿಧ ವಿಭಾಗಗಳ ಅಡಿಯಲ್ಲಿ ಸುಮಾರು 12,000 ಪುಟಗಳ ಚಾರ್ಜ್ ಶೀಟ್ ನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ಬಿ) ಯಿಂದ ನೀರವ್ ಮೋದಿ ಹಾಗೂ ಆತನ ಸಹವರ್ತಿಗಳು ನಕಲಿ ಸಾಲ ಮಂಜೂರಾತಿ ಪತ್ರಗಳನ್ನು ಪಡೆದ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ಮೋದಿ ಅವರ ಸಂಬಂಧಿ, ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಅವರ ಗೀತಾಂಜಲಿ ಗ್ರೂಪ್ಸ್ ವಿರುದ್ಧ ಸಹ ಇಡಿ ಎರಡನೇ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣ ಸಂಬಂಧ ಫೆಬ್ರವರಿ 14 ರಂದು ಮೊದಲ ಬಾರಿಗೆ ಎಫ್ಐಆರ್ ದಾಖಲಾದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಮೋದಿ ಮತ್ತು ಅವರ ಸಹವರ್ತಿಗಳ ವಿರುದ್ಧದ ಜಾರಿ ನಿರ್ದೇಶನಾಲಯ ಮಾಡಿರುವ ತನಿಖೆಯ ದಾಖಲೆಗಳನ್ನು ಸಹ ಚಾರ್ಜ್ ಶೀಟ್ ನಲ್ಲಿ ತೋರಿಸಲಾಗಿದೆ.
ಇದೇ ವೇಳೆ ಸಿಬಿಐಅ ಸಹ ಈ ತಿಂಗಳ ಪ್ರಾರಂಭದಲ್ಲಿ ಎಅರಡು ಚಾರ್ಜ್ ಶೀಟ್ ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com