ರೋಬೋಟ್ ನಿಂದ ಜನರು ನಿರುದ್ಯೋಗಿಗಳಾಗುವುದಿಲ್ಲ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಕೃತಕ ಬುದ್ಧಿಮತ್ತೆ ಬಳಸಿ ತಯಾರಾಗುವ ರೋಬೋಟ್ ಗಳು ಸಹ ಮಾನವರನ್ನು ಸಂಪೂರ್ಣ ನಿರುದ್ಯೋಗಿಯನ್ನಾಗಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ....
ಸತ್ಯ ನಾಡೆಲ್ಲಾ
ಸತ್ಯ ನಾಡೆಲ್ಲಾ
Updated on
ಲಂಡನ್: ಕೃತಕ ಬುದ್ಧಿಮತ್ತೆ ಬಳಸಿ ತಯಾರಾಗುವ ರೋಬೋಟ್ ಗಳು ಸಹ ಮಾನವರನ್ನು ಸಂಪೂರ್ಣ ನಿರುದ್ಯೋಗಿಯನ್ನಾಗಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ದಿ ಸಂಡೇ ಟೆಲಿಗ್ರಾಫ್ ಗೆನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನರು ಎಂದಿಗೂ ’ಘನತೆ’ಯನ್ನು ತಂದುಕೊಡುವಂತಹಾ ಉದ್ಯೋಗವನ್ನು ಅಪೇಕ್ಷಿಸುತ್ತಾರೆ. ಹೀಗಾಗಿ ಅದಕ್ಕೆ ಹೊರತಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನೈತಿಕವಾಗಿ ಅನ್ವಯಿಸುವುದು ಹೇಗೆನ್ನುವ ಕುರಿತು ಆಲೋಚಿಸಬೇಕು."2018 ರಲ್ಲಿ ನೈತಿಕತೆ ಕುರಿತಂತೆ ಹೆಚ್ಚು ಚರ್ಚೆಯಾಗುತ್ತಿದೆ.ಕೃತಕ ಬುದ್ಧಿಮತ್ತೆಯುಳ್ಳ ತಂತ್ರಜ್ಞಾನವನ್ನು ನಿರ್ಮಿಸುತ್ತಿರುವ  ಇಂಜಿನಿಯರ್ ಗಳು  ಮತ್ತು ಕಂಪೆನಿಗಳು ತಾವು ಅಳವಡಿಸಿಕೊಳ್ಳುವ  ತತ್ವಗಳ ಹಾಗೂ ಅದರಿಂದ ನಾವು ಆಯ್ದುಕೊಳ್ಳುವ  ಆಯ್ಕೆಗಳು ಯಾವ ಪಕ್ಷಪಾತದ ವ್ಯವಸ್ಥೆ ರಚನೆಗೆ ಕಾರಣವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು." ಅವರು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥೆ ಆಟೋಮೊಬೈಲ್ ಕ್ಷೇತ್ರದ ಬಳಕೆಗಾಗಿ ಪಕ್ಷಪಾತವನ್ನು ಗುರುತಿಸುವ ವಿಭಿನ್ನ ಕೃತಕ ಬುದ್ಧಿಮತ್ತೆಯುಳ್ಳ ಸಾಧನವನ್ನು ನಿರ್ಮಿಸುತ್ತಿದೆ ಎಂದು ಮೇ 25ರ ಎಂಐಟಿ ಟೆಕ್ನಾಲಜಿ ರಿವ್ಯೂ ವರದಿಯು ಹೇಳಿದೆ. ಈ ಸಾಧನವು ಕೃತಕ ಬುದ್ಧಿಮತ್ತೆಯನ್ನು ಹೊಂದಿಯೂ ತಾರತಮ್ಯವಿಲ್ಲದೆಯೇ ವ್ಯವಹಾರಗಳನ್ನು ನಡೆಸುವುದಕ್ಕೆ ಸಮರ್ಥವಾಗಿದೆ. 
"ನಾವು ಪರಿಪೂರ್ಣತೆಯನ್ನು ಖಂಡಿತವಾಗಿ ನಿರೀಕ್ಷಿಸುವುದಿಲ್ಲ ಆದರೆ ಸಾಕಷ್ಟು ಪ್ರಮಾಣದಲ್ಲಿ ಪಕ್ಷಪಾತ ನಡೆಯದಂತೆ ಇದನ್ನು ರೂಪಿಸಲಾಗಿದೆ" ಅವರು ಹೇಳಿದ್ದಾರೆ.
ಸಂಸ್ಥೆ ಉತ್ತಮ ಇತಿಹಾಸವನ್ನು ಹೊಂದಿದೆ. ಹಾಗೆಯೇ ಸಂಸ್ಥೆಯ ವ್ಯವಹಾರವು ಗ್ರಾಹಕರನ್ನು ಆಧರಿಸಿದೆ ಎಂದು ನಾಡೆಲ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com