ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಥಮ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಆಗಿ ಸುಧಾ ಬಾಲಕೃಷ್ಣನ್ ನೇಮಕವಾಗಿದ್ದಾರೆ.
ಎನ್ಎಸ್ಡಿಎಲ್ನ ಉಪಾಧ್ಯಕ್ಷರಾಗಿದ್ದ ಸುಧಾ ಅವರು ಮುಂದಿನ ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿರಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಇವರು ಆರ್ಬಿಐನ ಸಿಎಫ್ಒ ಆಗುವ ಮೂಲಕ ಸರ್ಕಾರದ ಪಾವತಿ, ಆದಾಯ ತೆರಿಗೆ ಸಂಗ್ರಹ, ಸಂಬಂಧ ಸರ್ಕಾರ ಹಾಗು ಬ್ಯಾಂಕ್ ಖಾತೆ ವಿಭಾಗಗಳನ್ನು ನಿರ್ವಹಣೆ ಮಾಡಲಿದ್ದಾರೆ.
ಇದೇ ವೇಳೆ ಇವರು ದೇಶ, ವಿದೇಶಗಳಲ್ಲಿ ಕೇಂದ್ರ ಬ್ಯಾಂಕ್ ಹೂಡಿಕೆ ಕುರಿತು ಗಮನ ನೀಡಲಿದ್ದಾರೆ.