ಬ್ಯಾಂಕ್ ಮುಷ್ಕರದಿಂದ 20 ಸಾವಿರ ಕೋಟಿ ಮೊತ್ತದ ವಹಿವಾಟಿನ ಮೇಲೆ ಪರಿಣಾಮ: ಅಸೋಚಾಮ್

ಎರಡು ದಿನಗಳ ರಾಷ್ಟ್ರೀಕೃತ ಬ್ಯಾಂಕುಗಳ ಮುಷ್ಕರದಿಂದಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ರಾಹಕರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಸೊಚಾಮ್ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕುಗಳ ಒಕ್ಕೂಟ  ವೇದಿಕೆ  ದೇಶಾದ್ಯಂತ ಕರೆ ನೀಡಿರುವ  ಎರಡು ದಿನಗಳ ರಾಷ್ಟ್ರೀಕೃತ ಬ್ಯಾಂಕುಗಳ ಮುಷ್ಕರದಿಂದಾಗಿ ಸುಮಾರು  20 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ರಾಹಕರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಸೊಚಾಮ್ ಹೇಳಿದೆ.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಪುನಶ್ಚೇತನಕ್ಕೆ  ಸೂಕ್ತ ಯೋಜನೆ ರೂಪಿಸುವಂತೆ  ಅಸೊಚಾಮ್ ಸರ್ಕಾರವನ್ನು ಆಗ್ರಹಿಸಿದೆ.

ಸರ್ಕಾರಿ ಸ್ವಾಮ್ಯದ ಸಾಲದಾತರು ಹೆಚ್ಚಿನ ಮಟ್ಟದಲ್ಲಿ ಮರಪಾವತಿಯಾಗದ ಸಾಲ ಹೊಂದಿದ್ದಾರೆ.  2018ರ ಮಾರ್ಚ್ ವೇಳೆಗೆ 50 ಸಾವಿರ ಕೋಟಿ ರೂಪಾಯಿ ನಷ್ಟ ಹೊಂದಿರುವ ಬಗ್ಗೆ ಮಾಹಿತಿ ಇದೆ.
  ಆ ಬ್ಯಾಂಕುಗಳು 2017ರ ಡಿಸೆಂಬರ್ ಅಂತ್ಯದ ವೇಳೆಗೆ ಹೊಂದಿದ್ದ ನಷ್ಟದ ಪ್ರಮಾಣ 19 ಸಾವಿರ ಕೋಟಿಗೂ ಎರಡು ಪಟ್ಟು ಹೆಚ್ಚಾಗಿದೆ  ಎಂದು ಅಸೋಚಾಮ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com