16 ದಿನಗಳ ಬಳಿಕ, ಪೆಟ್ರೋಲ್ ದರ 60 ಪೈಸೆ, ಡಿಸೇಲ್ 56 ಪೈಸೆ ಇಳಿಕೆ!

ಅಂತಾರಾಷ್ಟ್ರೀಯ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದ 16 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್...
ಪೆಟ್ರೋಲ್ ಬಂಕ್
ಪೆಟ್ರೋಲ್ ಬಂಕ್
ನವದೆಹಲಿ: ಅಂತಾರಾಷ್ಟ್ರೀಯ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದ 16 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರ ಅತ್ಯಲ್ಪ ಇಳಿಕೆ ಕಂಡಿದೆ. 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್ ಪೆಟ್ರೋಲ್ ದರವನ್ನು 60 ಪೈಸೆ ಹಾಗೂ ಡೀಸೆಲ್ ದರದಲ್ಲಿ 56 ಪೈಸೆ ಕಡಿಮೆ ಮಾಡಲಾಗಿದೆ. 
ಮಂಗಳವಾರ ಪೆಟ್ರೋಲ್ ದರ 78.43 ತಲುಪುವ ಮೂಲಕ ಈವರೆಗಿನ ಅತಿ ಹೆಚ್ಚು ದರಮಟ್ಟವನ್ನು ತಲುಪಿತ್ತು. ಪೆಟ್ರೋಲ್ ದರ ಕಡಿತದ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ದರ 77.83 ರುಪಾಯಿ ಆಗಿದೆ. ಇನ್ನು ಡೀಸೆಲ್ ದರ 69.31 ತಲುಪಿದ್ದು ಇದೀಗ ದರ ಇಳಿಕೆ ಬಳಿಕ 68.75 ರುಪಾಯಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com