ಉದ್ದೇಶಪೂರ್ವಕ ಸಾಲಗಾರರ ಪಟ್ಟಿ ಬಹಿರಂಗಪಡಿಸಲು ನಕಾರ: ಆರ್ಬಿಐ ಗವರ್ನರ್ ಗೆ ಸಿಐಸಿ ನೋಟೀಸ್

ಸಾಲಗಾರರ ಪಟ್ಟಿಯನ್ನು ಉದ್ದೇಶಪೂರ್ವಕವಾಗಿ ಬಹಿರಂಗಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಆರ್ ಬಿಐ ಗವರ್ನರ್ ಊರ್ಜಿತ್ .....
ಊರ್ಜಿತ್ ಪಟೇಲ್
ಊರ್ಜಿತ್ ಪಟೇಲ್
ನವದೆಹಲಿ: ಸಾಲಗಾರರ ಪಟ್ಟಿಯನ್ನು ಉದ್ದೇಶಪೂರ್ವಕವಾಗಿ ಬಹಿರಂಗಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಶೋಕಾಸ್ ನೋಟೀಸ್ ಜಾರಿಗೊಳಿಸಿದೆ.
ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವರೌ ಕೆಟ್ಟ ಸಾಲಗಳ ಕುರಿತು ಬರೆದ ಪತ್ರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಪ್ರಧಾನಿ ಹಾಗೂ ಹಣಕಾಸು ಸಚಿವರಿಗೆ ಸಿಐಸಿ ಇದೇ ವೇಳೆ ಕೇಳಿದೆ.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ  ಆರ್ ಬಿಐ  50 ಕೋಟಿ ಮತ್ತು ಅದಕ್ಕೂ ಹೆಚ್ಚಿನ ಬ್ಯಾಂಕ್ ಸಾಲಗಳನ್ನು ತೆಗೆದುಕೊಂಡಿರುವ ಉದ್ದೇಶಪೂರ್ವಕ ವಂಚಕರ ಸರನ್ನು ಬಹಿರಂಗಪಡಿಸುವುದಕ್ಕೆ ನಿರಾಕರಿಸಿದ ಆರ್ ಬಿಐ ಗವರ್ನರ್ ಗೆ ಸಿಐಸಿ ತಾನು ನೋಟೀಸ್ ನಿಡಿದೆ.  ಆಯೋಗದ ಕಮಿಷನರ್ ಶೈಲೇಶ್ ಗಾಂಧಿ ಉದ್ದೇಶಪೂರ್ವಕ  ವಂಚಕರ ಪಟ್ಟಿಯನ್ನು ಈ ತಕ್ಷಣ ಬಹಿರಂಗಪಡಿಸಲು ಕರೆ ನೀಡಿದ್ದಾರೆ.
ಸಾರ್ವಜನಿಕ  ಕ್ಷೇತ್ರದಲ್ಲಿ ಪಾರದರ್ಶಕತೆ, ಹೆಚ್ಚಿಸುವ ಒಟ್ಟಾರೆ ಆಡಳಿತ ಸುಧಾರಣೆಗೆ ಸಿಐಸಿ ಮುಂದಾಗಿದ್ದು ಇದಕ್ಕಾಗಿ ಆಯೋಗವು ಮಾರ್ಗದರ್ಶಿ ಸೂತ್ರಗಳನ್ನು ಸಹ ಹೊರಡಿಸಿದೆ.
"ಆರ್ ಬಿಐ ಗವರ್ನರ್ ಹಾಗೂ ಡೆಪ್ಯುಟಿ ಗವರ್ನರ್ ಹೇಳಿಕೆಗಳಿಗೆ ಸಾಮ್ಯತೆ ಇಲ್ಲವೆಂದು ಆಯೋಗ ಅಭಿಪ್ರಾಯಪಡುತ್ತದೆ. ಆರ್ ಬಿಐನ ಜಾಲತಾಣದಲ್ಲಿನ ಆರ್ ಟಿಐ ನೀತಿಯ ಕುರಿತಂತೆ ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಇದು ಅನುಸರಿಸಿಲ್ಲ.ಹೀಗಾಗಿ ಸುಪ್ರೀಂ ಕೋರ್ಟ್ ಸಿಐಸಿ ವರ್ಸಸ್ ಜಯಂತಿ ಲಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪು ಇಲ್ಲಿ ಉಲ್ಲೇಖಾರ್ಹ"ಮಾಹಿತಿ ಕಮಿಷನರ್ ಶ್ರೀಧರ್ ಆಚಾರ್ಯುಲು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com