ತೈಲ ದರದ ನಡುವೆ ಜನಸಾಮಾನ್ಯನಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಎಲ್ ಪಿಜಿ ದರ 2.89 ರೂ, ಸಬ್ಸಿಡಿ ಇಲ್ಲದ್ದಕ್ಕೆ 59 ರೂ ಏರಿಕೆ

ತೈಲ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ಹೊರೆಯಾಗಿರುವ ವೇಳೆಯಲ್ಲೇ ಎಲ್ ಪಿಜಿ ಸಿಲಿಂಡರ್ ಶಾಕ್ ಬರಸಿಡಿಲಿನಂತೆ ಬಂದೆರಗಿದೆ.
ತೈಲ ದರದ ನಡುವೆ ಜನಸಾಮಾನ್ಯನಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಎಲ್ ಪಿಜಿ ದರ 2.89 ರೂ, ಸಬ್ಸಿಡಿ ಇಲ್ಲದ್ದಕ್ಕೆ 59 ರೂ ಏರಿಕೆ
ತೈಲ ದರದ ನಡುವೆ ಜನಸಾಮಾನ್ಯನಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಎಲ್ ಪಿಜಿ ದರ 2.89 ರೂ, ಸಬ್ಸಿಡಿ ಇಲ್ಲದ್ದಕ್ಕೆ 59 ರೂ ಏರಿಕೆ
ನವದೆಹಲಿ: ತೈಲ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ  ಹೊರೆಯಾಗಿರುವ ವೇಳೆಯಲ್ಲೇ ಎಲ್ ಪಿಜಿ ಸಿಲಿಂಡರ್ ಶಾಕ್ ಬರಸಿಡಿಲಿನಂತೆ ಬಂದೆರಗಿದೆ. 
ಸೆ.30 ರಂದು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ದರ 2.89 ರೂಪಾಯಿ ಎರಿಕೆಯಾಗಿದ್ದು ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ 59 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಬೆಲೆ ಹಾಗೂ ವಿದೇಶಾಂಗ ವಿನಿಮಯ ವ್ಯತ್ಯಾಸಗಳಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಹೇಳಿದೆ. 
ಜಿಎಸ್ ಟಿಯಿಂದಾಗಿ ವಾಸ್ತವದಲ್ಲಿ ಗೃಹಬಳಕೆ ಎಲ್ ಪಿಜಿ ಗ್ರಾಹಕರಿಗೆ 2.89 ರೂಪಾಯಿಗಳಷ್ಟು ಮಾತ್ರ ಹೊರೆಯಾಗಲಿದೆ ಎಂದು ಐಒಸಿ ಹೇಳಿದೆ. ಇದೇ ವೇಳೆ ಗ್ರಹಾಕರ ಬ್ಯಾಂಕ್ ಖಾತೆಗೆ ಕಳಿಸಲಾಗುವ ಸಬ್ಸಿಡಿ ಹಣವನ್ನು 376.60 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ ನಲ್ಲಿ ಪ್ರತಿ ಸಿಲಿಂಡರ್ ಗೆ 320.49 ರೂಪಾಯಿ ಸಬ್ಸಿಡಿ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com