ತೈಲ ಬೆಲೆ ಏರಿಕೆ ಪರಿಣಾಮ ಪ್ರಯಾಣಿಕ ವಾಹನ ಮಾರಾಟದಲ್ಲಿ ಕುಸಿತ!

ತೈಲ ಬೆಲೆ ಏರಿಕೆ ಹಾಗೂ ಇತ್ತೀಚಿನ ದಿನಗಳಲ್ಲಿ ಉಂಟಾದ ಪ್ರವಾಹ ಪ್ರಯಾಣಿಕ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದ್ದು ಸೆಪ್ಟೆಂಬರ್ ತಿಂಗಳ ಮಾರಾಟ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತೈಲ ಬೆಲೆ ಏರಿಕೆ ಹಾಗೂ ಇತ್ತೀಚಿನ ದಿನಗಳಲ್ಲಿ ಉಂಟಾದ ಪ್ರವಾಹ ಪ್ರಯಾಣಿಕ ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದ್ದು ಸೆಪ್ಟೆಂಬರ್ ತಿಂಗಳ ಮಾರಾಟ ಕುಸಿತ ಕಂಡಿದೆ. 
ಟಾಟಾ ಮೋಟಾರ್ಸ್, ಟೊಯಾಟ ಕಿರ್ಲೋಸ್ಕರ್ ಸಂಸ್ಥೆಗಳ ಮಾರಾಟ ಕಡಿಮೆ ಪ್ರಮಾಣದಲ್ಲಿ ಕುಸಿದಿದ್ದರೆ, ಹುಂಡೈ, ಮಹಿಂದ್ರಾಽಮಹಿಂದ್ರಾ, ಫೋರ್ಡ್ ಸಂಸ್ಥೆಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ.  ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜೂಕಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟ ಸೆಪ್ಟೆಂಬರ್ ತಿಂಗಳಲ್ಲಿ 1,53,550 ಯುನಿಟ್ ಗಳಷ್ಟಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಸ್ಥೆಯ ಕಾರುಗಳು 1,51,400 ಯುನಿಟ್ ಗಳಷ್ಟು ಮಾರಾಟ ಕಂಡಿತ್ತು.
ಕಾಪಾಂಕ್ಟ್ ವಿಭಾಗದ ಮಾಡಲ್ ಗಳಾದ ಸ್ವಿಫ್ಟ್ ಬೆಲೆನೋ ಗಳ ಸೆಪ್ಟೆಂಬರ್ ತಿಂಗಳ ಮಾರಾಟ ಶೇ.1.4 ರಷ್ಟು ಏರಿಕೆ ಕಂಡಿದ್ದರೂ ಯುಟಿಲಿಟಿ ವೆಹಿಕಲ್ ಹಾಗೂ ಮಿನಿ ಸೆಗ್ಮೆಂಟ್ ಕಾರ್ ಗಳ ಮಾರಾಟ ಕುಸಿದೆ.  ತೈಲ ಬೆಲೆ ಏರಿಕೆ ಹಾಗೂ ಪ್ರವಾಹ ಎದುರಾಗಿರುವುದು ಗ್ರಾಹಕರ ಕೊಳ್ಳುವ ಭಾವನೆ ಮೇಲೆ ಪರಿಣಾಮ ಬೀರಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com