ತುಟ್ಟಿಯಾಗಲಿದೆ ವಿಮಾನ ಪ್ರಯಾಣ ದರ, ಏಕೆ? ಇಲ್ಲಿದೆ ಮಾಹಿತಿ

ವಿಮಾನ ಪ್ರಯಾಣ ದರ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ. ವಿಮಾನಗಳಿಗೆ ಬಳಕೆ ಮಾಡಲಾಗುವ ಏವಿಯೇಷನ್ ಟ್ರಬೈನ್ ತೈಲದ ಮೇಲಿನ ಸೀಮಾ ಸುಂಕವನ್ನು ಹೆಚ್ಚುಗೊಳಿಸುವ ಸರ್ಕಾರದ ತೀರ್ಮಾನದ
ತುಟ್ಟಿಯಾಗಲಿದೆ ವಿಮಾನ ಪ್ರಯಾಣ ದರ, ಏಕೆ? ಇಲ್ಲಿದೆ ಮಾಹಿತಿ
ತುಟ್ಟಿಯಾಗಲಿದೆ ವಿಮಾನ ಪ್ರಯಾಣ ದರ, ಏಕೆ? ಇಲ್ಲಿದೆ ಮಾಹಿತಿ
ನವದೆಹಲಿ: ವಿಮಾನ ಪ್ರಯಾಣ ದರ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ. ವಿಮಾನಗಳಿಗೆ ಬಳಕೆ ಮಾಡಲಾಗುವ ಏವಿಯೇಷನ್ ಟ್ರಬೈನ್ ತೈಲದ ಮೇಲಿನ ಸೀಮಾ ಸುಂಕವನ್ನು ಹೆಚ್ಚುಗೊಳಿಸುವ ಸರ್ಕಾರದ ತೀರ್ಮಾನದ ಬೆನ್ನಲ್ಲೆ ವಿಮಾನ ಪ್ರಯಾಣ ದರ ಏರಿಕೆ ಮಾಡಲು ಏರ್ ಲೈನ್ ಗಳು ಸಿದ್ಧತೆ ನಡೆಸಿವೆ. 
ಪೂರಕ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಟಿಕೆಟ್ ದರವನ್ನೂ ಏರಿಕೆ ಮಾಡಲಾಗುತ್ತದೆ ಎಂಬ ಸುಳಿವನ್ನು ವಿಮಾನಯಾನ ಸಂಸ್ಥೆಗಳು ನೀಡಿದೆ. ಇದೇ ವೇಳೆ ದೇಶಿ ವಿಮಾನ ಸಂಸ್ಥೆಗಳು ನಷ್ಟ ಎದುರಿಸುತ್ತಿದ್ದು, ಟ್ರಾವಲ್ ಸೀಸನ್ ಮುಂದಿರುವಂತೆಯೇ ವಿಮಾನ ಪ್ರಯಾಣ ದರವನ್ನು ಏರಿಕೆ ಮಾಡುವುದರ ಬಗ್ಗೆ ಸುಳಿವು ನೀಡಿದ್ದು ಟಿಕೆಟ್ ದರವನ್ನು ಏರಿಕೆ ಮಾಡುವುದರ ಜೊತೆಗೆ ಆದಯಾ ಹೆಚ್ಚಿಸುವುದಕ್ಕೆ ಇನ್ನೂ ಹಲವು ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದು ವಿಮಾನ ಸಂಸ್ಥೆಗಳು ತಿಳಿಸಿವೆ. 
ಎಟಿಎಫ್ (ವಿಮಾನ ಇಂಧನ)ದ ಮೇಲಿನ ಅಬಕಾರಿ ಸುಂಕವನ್ನು ಶೇ.5 ರಷ್ಟು ಏರಿಕೆ ಮಾಡುವುದಾಗಿ ಕಳೆದ ತಿಂಗಳು ಕೇಂದ್ರ ಸರ್ಕಾರ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com