ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ 2.69 ಲಕ್ಷ ಕೋಟಿ ಲಾಸ್!

ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಹೂಡಿಕೆದಾರರು 2.69 ಲಕ್ಷ ಕೋಟಿ ನಷ್ಟ ಎದುರಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ 2.69 ಲಕ್ಷ ಕೋಟಿ ಲಾಸ್!
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ 2.69 ಲಕ್ಷ ಕೋಟಿ ಲಾಸ್!
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಹೂಡಿಕೆದಾರರು 2.69 ಲಕ್ಷ ಕೋಟಿ ನಷ್ಟ ಎದುರಿಸಿದ್ದಾರೆ. 
ಮುಂಬೈನ ಬಿಎಸ್‌ಇ ಸೆನೆಕ್ಸ್  34,000ಕ್ಕೂ ಕಡಿಮೆ ಅಂಕಗಳಿಗೆ ಕುಸಿದಿದ್ದರೆ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,000 ಅಂಕಗಳ ಹತ್ತಿರವಿದೆ.  ಬಿಎಸ್‌ಇ 30-ಷೇರು(ಸ್ಕ್ರಿಪ್ಸ್) ಸೂಚ್ಯಂಕ 759.74 ಅಂಕಗಳು ಕುಸಿದಿದ್ದು ಈ ಪಟ್ಟಿಯಲ್ಲಿನ ಸಂಸ್ಥೆಗಳು 2,69,347.81 ಕೋಟಿ ರೂಪಾಯಿಗಳಿಂದ 1,35,70,402.59  ರೂಪಾಯಿಗಳಿಗೆ ಕುಸಿದಿದೆ. 
ಇದಕ್ಕೂ ಮುನ್ನ ಅಮೆರಿಕ ಷೇರು ಮಾರುಕಟ್ಟೆಯೂ ಭಾರಿ ಕುಸಿತವನ್ನು ಕಂಡಿತ್ತು. ಅತ್ತ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್‌ಗೆ 74.45 ರೂ.ಗೆ ತಲುಪಿದೆ. ಅಮೆರಿಕ ಮಾರುಕಟ್ಟೆಯಲ್ಲೂ ಕುಸಿತ ಕಂಡಿರುವುದು ಮುಂಬೈ ನ ಷೇರುಪೇಟೆ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com