ರಿಲಯನ್ಸ್ ಜಿಯೋ, ಪೆಪ್ಸಿ ಕೋ, ಸೇರಿ ಹಲ ಸಂಸ್ಥೆಗಳ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ: ಎ ಎಸ್ ಸಿಐ

ಜಾಹೀರಾತು ವಲಯದ ನಿಯಂತ್ರಕ ಸಂಸ್ಥೆ ಎ ಎಸ್ ಸಿಐ ಜೂನ್ ತಿಂಗಳಲ್ಲಿ 208 ಜಾಹಿರಾತುಗಳಿಗೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಿದ್ದು ಇದರಲ್ಲಿ ರಿಲಯನ್ಸ್....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಜಾಹೀರಾತು ವಲಯದ ನಿಯಂತ್ರಕ ಸಂಸ್ಥೆ ಎ ಎಸ್ ಸಿಐ ಜೂನ್ ತಿಂಗಳಲ್ಲಿ 208 ಜಾಹಿರಾತುಗಳಿಗೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಿದ್ದು ಇದರಲ್ಲಿ ರಿಲಯನ್ಸ್ ಜಿಯೋ, ಪೆಪ್ಸಿ ಕೋ ಇಂಡಿಯಾ, ಸ್ಪೈಸ್ ಜೆಟ್, ಹಿಂದೂಸ್ಥಾನ್ ಯೂನಿಲಿವರ್ ಸೇರಿ 179 ಜಾಹೀರಾತುಗಳು ಗ್ರಾಹಕರ ಹಾದಿ ತಪ್ಪಿಸುತ್ತಿದೆ ಎಂದು ತಿಳಿದುಬಂದಿದೆ.
208 ಜಾಹಿರಾತು ಕುರಿತ ದೂರು ಸ್ವೀಕರಿಸುತ್ತಿದ್ದಂತೆ ಅದರಲ್ಲಿ  63ಜಾಹೀರಾತು ತಯಾರಕರು ತಮ್ಮ ತಪ್ಪನ್ನು ತಕ್ಷಣ ತಿದ್ದಿಕೊಳ್ಳುವ ಖಾತ್ರಿ ನೀಡಿದ್ದಾರೆ.
ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎ ಎಸ್ ಸಿಐ)  ಗ್ರಾಹಕರ ದೂರನ್ನು ಆಧರಿಸಿ ತನಿಖೆ ನಡೆದಿದ್ದು  ಒಟ್ಟು 145 ಜಾಹೀರಾತ್ತುಗಳ ಪೈಕಿ 89 ಜಾಹೀರಾತನ್ನು ಆಕ್ಷೇಪಾರ್ಹವೆಂದು ಹೇಳಿದೆ. ಇವುಗಳಲ್ಲಿ 25 ಜಾಹೀರಾತುಗಳುಆರೋಗ್ಯ ವಿಭಾಗಕ್ಕೆ ಸೇರಿದ್ದರೆ 27 ಶಿಕ್ಷಣ ವಲಯಕ್ಕೂ, 15 ಆಹಾರ ಕ್ಷೇತ್ರಕ್ಕೆ ಐದು ಪರ್ಸನಲ್ ಕೇರಿ ಗೆ ಹಗೂ ಇನ್ನೂ 17  ಇನ್ನಿತರೆ ವಲಯಗಳಿಗೆ ಸಂಬಂಧಿಸಿದೆ.
ಪೆಪ್ಸಿಕೋ ಇಂಡಿಯಾದ ಕ್ವೇಕರ್ ಓಟ್ಸ್ ಗೆ ಸಂಬಂಧಿಸಿದ ಜಾಹೀರಾತಿನಲ್ಲಿ ದನಿಯ ಸಾಮ್ಯತೆಗೆ ಹೋಲಿಕೆಇಲ್ಲದ ದೃಶ್ಯಗಳಿದೆ ಎಂದು ಎ ಎಸ್ ಸಿಐ ಹೇಳಿದೆ.
ಇನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಜಾಹೀರಾತಿನಲ್ಲಿ ವಿಶ್ವದ ಅತ್ಯುತ್ತಮ ಹಾಗೂ ಅತಿ ದೊಡ್ಡ ನೆಟ್ ವರ್ಕ್ ಎಂದು ತೋರಿಸುವ ಮೂಲಕ ಜನರನ್ನು ಗೊಂದಲಕ್ಕೀಡುಮಾಡುತ್ತಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com