ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ವರದಿ: ನಿವ್ವಳ ಲಾಭ 9,516 ಕೋಟಿ ರೂ. ಗೆ ಏರಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ತ್ರೈಮಾಸಿಕ ಅವಧಿಯಲ್ಲಿ 9,516 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ ಅತಿ ಹೆಚ್ಚು ಪ್ರಮಾಣದ....
ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ವರದಿ: ನಿವ್ವಳ ಲಾಭ 9,516 ಕೋಟಿ ರೂ. ಗೆ ಏರಿಕೆ
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ತ್ರೈಮಾಸಿಕ ಅವಧಿಯಲ್ಲಿ 9,516 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ ಅತಿ ಹೆಚ್ಚು ಪ್ರಮಾಣದ ಲಾಭಾಂಶವೆಂದು ಸಂಸ್ಥೆ ವರದಿಯಲ್ಲಿ ಹೇಳಿಕೊಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಲಾಭಾಂಶದಲ್ಲಿ ಶೇ.17.4ರಷ್ಟು ಹೆಚ್ಚಳವಾಗಿದೆ.
ಹಿಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 8,109 ಕೋಟಿ ರೂ ಆಗಿತ್ತು ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಈ ತ್ರೈಮಾಸಿಕ ಅವಧಿಯಲ್ಲಿ ಆರ್ಐಎಲ್ ಆದಾಯವು ಶೇ 54.5 ಹೆಚ್ಚಳವಾಗಿದೆ. 156,291 ಕೋಟಿ ರು.ಆದಾಯ ದಾಖಲಾಗಿದೆ.