ಡಾಲರ್ ಎದುರು ರುಪಾಯಿ ಅಪಮೌಲ್ಯ ಕುರಿತು ಆತಂಕ ಬೇಡ: ವಿತ್ತ ಸಚಿವ ಅರುಣ್ ಜೇಟ್ಲಿ

ಡಾಲರ್ ಎದುರು ರುಪಾಯಿ ಕುಸಿಯುತ್ತಿದ್ದು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಡಾಲರ್ ಎದುರು ರುಪಾಯಿ ಕುಸಿಯುತ್ತಿದ್ದು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಜಾಗತಿಕ ಕಚ್ಚಾ ತೈಲ ಬೆಲೆಗಳ ಏರುಪೇರು, ವ್ಯಾಪಾರ ಯುದ್ಧದ ಉದ್ವಿಗ್ನತೆ ಮತ್ತು ಅಮೆರಿಕದೆಡೆಗೆ ಹಣದ ಹೊರಹರಿವು ಇದೆಲ್ಲಾ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅರುಣ್ ಜೇಟ್ಲಿ  ಹೇಳಿದ್ದಾರೆ. 
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ ಅವರು ದೇಶೀಯ ಆರ್ಥಿಕ ಪರಿಸ್ಥಿತಿ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ, ಈ ಅಪಮೌಲ್ಯಕ್ಕೆ ಯಾವುದೇ ದೇಶೀಯ ಕಾರಣಗಳಿಲ್ಲ ಎಂದು ಹೇಳಿದರು. 
ಅಮೆರಿಕ ಡಾಲರ್ ಹೊರತು ವಿಶ್ವದ ಯಾವುದೇ ಪ್ರಮುಖ ಕರೆನ್ಸಿ ಪೌಂಡ್, ಯೂರೋ ಮತ್ತು ಯೆನ್ ವಿರುದ್ಧ ಭಾರತೀಯ ರುಪಾಯಿ ಮೌಲ್ಯ ಕುಸಿದಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 
ಬುಧವಾರ 17 ಪೈಸೆ ಇಳಿಕೆಯಾಗಿದ್ದು ಆ ಮೂಲಕ ಪ್ರತೀ ಡಾಲರ್ ಗೆ  71.75 ರೂಗಳಾಗಿದೆ. ಆ ಮೂಲಕ ಸಾರ್ವಕಾಲಿಕ ದಾಖಲೆಯ ತಳ ಮಟ್ಟಕ್ಕೆ ರೂಪಾಯಿ ಕುಸಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com