40ರಲ್ಲೇ ನಿವೃತ್ತಿಯಾಗಬೇಕೆಂಬ ಕನಸೇ? ಆ ಕನಸು ನನಸಾಗಲು ಇಲ್ಲಿವೆ ಕೆಲವು ಸಲಹೆ!

ಯುವಕರಾಗಿದ್ದಾಗ ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡಬೇಕು, ಯಾವುದರಲ್ಲಾದರೂ ಹೂಡಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಯುವಕರಾಗಿದ್ದಾಗ ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡಬೇಕು, ಯಾವುದರಲ್ಲಾದರೂ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಬಹುತೇಕರು ಅಷ್ಟು ಗಂಭೀರವಾಗಿ ಯೋಚಿಸುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆರ್ಥಿಕತೆ ವಿಚಾರ ಬಂದಾಗ ಇಂಗ್ಲಿಷ್ ನಲ್ಲಿ 'ಫೈರ್' ಎಂಬ ಪದ ಆಗಾಗ ಕಿವಿಗೆ ಬೀಳುತ್ತಿರುತ್ತದೆ. ಅದನ್ನು ವಿಸ್ತರಿಸಿ ಹೇಳುವುದಾದರೆ Financially Independent, Retire Early, ಅಂದರೆ ಜೀವನದಲ್ಲಿ ಆರ್ಥಿಕ ಸ್ವತಂತ್ರರಾಗಿ ಮುನ್ನ ಬೇಗನೆ ನಿವೃತ್ತಿ ಹೊಂದುವುದೆಂದು.

ಅಮೆರಿಕ ಮೊದಲಾದ ಮುಂದುವರಿದ ದೇಶಗಳಲ್ಲಿ ಯುವಕರಾಗಿದ್ದಾಗಲೇ ಸುಮಾರು 20 ವರ್ಷದಲ್ಲಿಯೇ ಅಲ್ಲಿನ ಮಂದಿ ಬೇಗನೆ ನಿವೃತ್ತಿ ಹೊಂದುವುದಾಗಿ ಸಹಿ ಮಾಡಿರುತ್ತಾರಂತೆ. ಈ ವಿಷಯ ಕುರಿತು ನಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ಒತ್ತಡದ ವಾತಾವರಣದಲ್ಲಿ ಜನರು ಬದುಕುತ್ತಿರುವ ಸಂದರ್ಭದಲ್ಲಿ ಅತಿ ಹೆಚ್ಚು ಆದಾಯ ಗಳಿಸಿ ನಡುವಯಸ್ಸಿನಲ್ಲಿಯೇ ನಿವೃತ್ತಿ ಪಡೆಯಲು ಬಯಸುತ್ತಾರೆ. ಹಿಂದಿನ ಕಾಲದಂತೆ 60 ವರ್ಷಕ್ಕೆ ನಿವೃತ್ತಿ ಪಡೆಯುವುದು, ನಂತರ ಮನೆಯಲ್ಲಿ ಕಾಲ ಕಳೆಯುವುದು ಎಂಬ ಕಲ್ಪನೆ ಇತ್ತೀಚಿಗೆ ಕಡಿಮೆಯಾಗುತ್ತದೆ.

ಭಾರತದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ 40-45 ವರ್ಷಕ್ಕೆ ನಿವೃತ್ತಿ ಹೊಂದಬೇಕೆಂದು ಬಯಸುತ್ತಾರೆ. ಅಂದರೆ ಇಲ್ಲಿ ನಿವೃತ್ತಿ ಪಡೆಯುವುದೆಂದರೆ ಕೆಲಸಕ್ಕೆ ಸಂಪೂರ್ಣ ವಿರಾಮ ಹೇಳುವುದೆಂದಲ್ಲ. ಮನುಷ್ಯನಿಗಿರುವ ನಿಗದಿತ ಮತ್ತು ನಿಶ್ಚಿತ ಅವಧಿಯ ಕೆಲಸದಿಂದ ವಿರಾಮ ಮತ್ತು ಸ್ವಾತಂತ್ರ್ಯ ಸಿಗುವುದನ್ನು ನಿವೃತ್ತಿಯೆಂದು ಕರೆಯುತ್ತೇವೆ. ಇಚ್ಛೆ ಬಂದಷ್ಟು ಸಮಯ ಕೆಲಸ ಮಾಡಬೇಕೆಂದು ನಿವೃತ್ತಿ ಜೀವನದಲ್ಲಿ ಬಯಸುತ್ತಾರೆ, ಕೆಲವು ಹವ್ಯಾಸಗಳನ್ನು ಕೂಡ ಈ ಸಮಯದಲ್ಲಿ ಬೆಳೆಸಿಕೊಳ್ಳುತ್ತಾರೆ. ಒಟ್ಟಾರೆ ಜೀವನದ ಗುಣಮಟ್ಟ ಉತ್ತಮವಾಗಬೇಕೆಂಬ ಆಲೋಚನೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ.

ಬೇಗನೆ ನಿವೃತ್ತಿ ಹೊಂದಬೇಕೆಂಬ ಯೋಚನೆ ವ್ಯಕ್ತಿಯ ಸಾಮರ್ಥ್ಯ, ಜೀವದಲ್ಲಿ ರಿಸ್ಕ್ ತೆಗೆದುಕೊಳ್ಳುವ ಮನೋಭಾವವನ್ನು ನಿರ್ಧರಿಸಿಕೊಂಡು ಇರುತ್ತದೆ. ಹೆಚ್ಚೆಚ್ಚು ಹೂಡಿಕೆ ಮಾಡಿದಷ್ಟು ಅದಕ್ಕೆ ಸಂಪನ್ಮೂಲಗಳ ಕ್ರೋಢೀಕರಣದ ಅಗತ್ಯವಿರುತ್ತದೆ. ಇನ್ನೊಂದೆಡೆ ನಡುವಯಸ್ಸಿನಲ್ಲಿಯೇ ನಿವೃತ್ತಿ ಹೊಂದಬೇಕೆಂದರೆ ಯುವಕರಾಗಿದ್ದಾಗ ದುಡಿಮೆ ಮತ್ತು ಖರ್ಚು ಮಾಡುವಲ್ಲಿ ಕುಂಠಿತ ಇವೆಲ್ಲವೂ ಇರಬೇಕಾಗುತ್ತದೆ. ಬೇರೆಲ್ಲಕ್ಕಿಂತ ಯುವ ವಯಸ್ಸಿನಲ್ಲಿ ಹೂಡಿಕೆಯೇ ಮುಖ್ಯವಾಗುತ್ತದೆ.

ನಿವೃತ್ತಿಯಲ್ಲಿ ಉತ್ತಮ, ಸಂತೋಷ ಜೀವನ ನಡೆಸಬೇಕೆಂದರೆ ಆರ್ಥಿಕ ವಿಚಾರದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು.

ವ್ಯಾಪಾರ, ಉದ್ಯಮದಲ್ಲಿ ಹೂಡಿಕೆ; ಯುವಕರಿದ್ದಾಗಲೇ ಸ್ಟಾರ್ಟ್ ಅಪ್ ನಲ್ಲಿ ಒಂದು ಭಾಗವನ್ನು ಖರೀದಿಸಲು ನೋಡಬಹುದು, ಷೇರು ಮಾರುಕಟ್ಟೆಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡಬಹುದು. ಅದು ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಕಂಪೆನಿಗಳಾಗಿರಬೇಕು. ಇತ್ತೀಚೆಗೆ ಸ್ಟಾರ್ಟ್ ಅಪ್ ಉದ್ಯಮ ಹೆಚ್ಚಾಗಿ ಕೇಳುತ್ತೇವೆ. ಪ್ರತಿಭಾವಂತ ಉತ್ತಮ ಶೈಕ್ಷಣಿಕ ಹಿನ್ನಲೆಯುಳ್ಳ ಯುವಕರಿಗೆ ಸ್ಟಾರ್ಟ್ ಅಪ್ ಒಂದು ಉತ್ತಮ ವೇದಿಕೆಯಾಗಿದೆ. ಸಮಾಜದಲ್ಲಿ ಈಗಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಟಾಪ್ಟ್ ಅಪ್ ನಲ್ಲಿ ಪರಿಹಾರ ನೀಡಿದರೆ ಅದು ಖಂಡಿತಾ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಫಲಿತಾಂಶ ಸಿಗಲು ಕನಿಷ್ಠ 10 ವರ್ಷವಾದರೂ ಬೇಕು.

ಕಲೆಯಲ್ಲಿ ಹೂಡಿಕೆ: ನಮ್ಮಲ್ಲಿ ಅನೇಕರಿಗೆ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಪೈಂಟಿಂಗ್ ಅಥವಾ ಇತರ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ದಶಕಗಳ ನಂತರ ಇಲ್ಲಿ ನಿಮಗೆ ಉತ್ತಮ ಆದಾಯ ಬರಬಹುದು.

ಭೂಮಿಯಲ್ಲಿ ಹೂಡಿಕೆ: ಹೊನ್ನು ಮತ್ತು ಮಣ್ಣಿಗೆ ಹಾಕಿದ ಹಣ ಎಲ್ಲಿಗೂ ಹೋಗುವುದಿಲ್ಲ ಎಂಬುದು ಹಿರಿಯ ಅನುಭವಿಗಳ ಮಾತು. ರಿಯಲ್ ಎಸ್ಟೇಟ್ ಇತ್ತೀಚೆಗೆ ಎಷ್ಟು ಬೆಳೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೈಯಲ್ಲಿ ಹಣವಿದ್ದಾಗ ಭೂಮಿ ಖರೀದಿಸಿಕೊಂಡರೆ ಕೆಲ ವರ್ಷಗಳ ನಂತರ ದುಪ್ಪಟ್ಟು ಲಾಭ ಬರುತ್ತದೆ.

ಸ್ಟಾರ್ಟ್ ಅಪ್ ಗೆ ಕೆಲಸ ಮಾಡಿ:
ನೀವು ಪ್ರತಿಭಾವಂತರು, ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಛಲ ಇರುವವರಾಗಿದ್ದರೆ ನಿಶ್ಚಿತ ವರಮಾನ ಬರುವ ಕೆಲಸ ಬಿಟ್ಟು ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಿ. ಉದ್ಯಮದಲ್ಲಿ ನಿಮ್ಮ ಅನುಭವ, ಪ್ರತಿಭೆಗಳನ್ನು ಧಾರೆಯೆರೆಯಿರಿ. ಇದರಿಂದ ನಿವೃತ್ತ ಜೀವನ ಉತ್ತಮವಾಗಬಹುದು ಎಂದು ಸಿಂಪ್ಲಸ್ ಇನ್ಫಾರ್ಮೇಶನ್ ಸರ್ವಿಸಸ್  ಪ್ರೈ.ಲಿಮಿಟೆಡ್ ಸ್ಥಾಪಕ ರಜಸ್ ಕೆಲ್ಕರ್ ಹೇಳುತ್ತಾರೆ.

ಜೀವನದಲ್ಲಿ ಬೇಗನೆ ನಿವೃತ್ತಿ ಪಡೆಯಬೇಕು ಎಂದರೆ ಯುವಕರಾಗಿರುವಾಗ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕು. ಅದೊಂತರಾ ಸಾಹಸ ಕ್ರೀಡೆಯಿದ್ದಂತೆ. ಕೆಲವರು ಅದರಲ್ಲಿ ಯಶಸ್ಸು ಪಡೆಯುತ್ತಾರೆ, ಇನ್ನು ಕೆಲವರು ಯಶಸ್ವಿಯಾಗುವುದಿಲ್ಲ, ಹೀಗಾಗಿ ಪ್ರತಿಯೊಬ್ಬರಿಗೂ ಬೇಗ ನಿವೃತ್ತಿ ಪಡೆಯಲು ಮತ್ತು ಸಂತೋಷದ ನಿವೃತ್ತಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com