ಕೆಟ್ಟ ಸಾಲ ಕುಸಿತ, ಪಿಎಸ್ ಯು ಬ್ಯಾಂಕ್ ಗಳ ಸಾಲ ಮರುಪಡೆಯುವಿಕೆ ಚೇತರಿಕೆ: ಜೇಟ್ಲಿ

ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಯ ಪ್ರಮಾಣ ಕಡಿಮೆಯಾಗುತ್ತಿದ್ದು....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾಲ ಮರುಪಡೆಯುವಿಕೆ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಹೇಳಿದ್ದಾರೆ.
ಸಾರ್ವಜನಿಕ ವಾಲಯ(ಪಿಎಸ್ ಯು)ದ ಬ್ಯಾಂಕ್ ಗಳ ವಾರ್ಷಿಕ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಹಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಎನ್ ಪಿಎ ದೊಡ್ಡ ಸವಾಲಾಗಿದೆ. ಆದರೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಜಾರಿಗೊಳಿಸಿದ ನಂತರ, ಸಾಲ ಬಾಕಿ ಉಳಿಸಿಕೊಂಡಿರುವವರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಸಾಲ ಮರುಪಡೆಯುವ ಪ್ರಮಾಣ ಹೆಚ್ಚಾಗಿದೆ ಎಂದರು.
ಸಾಲ ಮರುಪಡೆಯುವಿಕೆ ಪ್ರಕ್ರಿಯೆ ಉತ್ತಮವಾಗಿದ್ದು, ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವು ಹೆಚ್ಚು ಉತ್ತಮವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಹಣಕಾಸು ಇಲಾಕೆ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು, ಈ ಹಣಕಾಸು ವರ್ಷದಲ್ಲಿ ಐಬಿಸಿ ಮೂಲಕ 1.8 ಲಕ್ಷ ಕೋಟಿ ರುಪಾಯಿ ಮರುಪಡೆಯುವ ನಿರೀಕ್ಷೆ ಇದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com