ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಪಾತಾಳಕ್ಕಿಳಿಯಿತು ಆ ಕಂಪನಿಯ ಷೇರು!

ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈಗ ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಉದ್ಯಮ ವಲಯಕ್ಕೂ ತಲೆ
ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಪಾತಾಳಕ್ಕಿಳಿಯಿತು ಆ ಕಂಪನಿಯ ಷೇರು!
ಕೇವಲ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಪಾತಾಳಕ್ಕಿಳಿಯಿತು ಆ ಕಂಪನಿಯ ಷೇರು!
ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈಗ ವಾಟ್ಸ್ ಆಪ್ ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಉದ್ಯಮ ವಲಯಕ್ಕೂ ತಲೆ ಬಿಸಿ ಶುರುವಾಗಿದೆ. 
ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಷೇರುಗಳು ಕೇವಲ ಒಂದೇ ಒಂದು ವಾಟ್ಸ್ ಆಪ್ ಮೆಸೇಜ್ ನಿಂದ ಬರೊಬ್ಬರಿ ಶೇ. 70 ರಷ್ಟು ಇಳಿಕೆಯಾಗದೆ. ವಾರ್ಷಿಕ ಸಮಾನ್ಯ ಸಭೆಗೂ ಮುನ್ನ ಈ ಘಟನೆ ನಡೆದಿದ್ದು 2016 ರ ನವೆಂಬರ್ ನಿಂದ ಇದೇ ಮೊದಲ ಬಾರಿಗೆ ಸಂಸ್ಥೆಯ ಷೇರುಗಳು ಈ ಪ್ರಮಾಣದಲ್ಲಿ ಕುಸಿದಿದೆ. ಸಂಸ್ಥೆಯ ಅಕೌಂಟಿಂಗ್ ಪದ್ಧತಿಗಳಲ್ಲಿ ಮೋಸ ನಡೆಯುತ್ತಿದೆ ಎಂಬ ವಾಟ್ಸ್ ಆಪ್ ಮೆಸೇಜ್ ಟ್ರೇಡರ್ ಗಳಲ್ಲಿ ಆತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ ಷೇರುಗಳು ಬೃಹತ್ ಪ್ರಮಾಣದಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. 
ವರದಿಗಳ ಪ್ರಕಾರ ಹೂಡಿಕೆದಾರರಿಗೆ ಬಂಡವಾಳ ಮಾರುಕಟ್ಟೆಯಲ್ಲಿ ಬರೊಬ್ಬರಿ 9,200 ಕೋಟಿ ರೂಪಾಯಿ ನಷ್ಟವಾಗಿದ್ದು,  2009 ರ ಜನವರಿಯಲ್ಲಿ ಸತ್ಯಂ ಕಂಪ್ಯೂಟರ್ಸ್ ಹಗರಣ ಬೆಳಕಿಗೆ ಬಂದ ನಂತರ ಸತ್ಯಂ ಕಂಪ್ಯೂಟರ್ಸ್ ಸರ್ವೀಸ್ ನ ಷೇರುಗಳು ಒಂದೇ ದಿನದಲ್ಲಿ ಶೇ.83 ರಷ್ಟು ಕುಸಿದಿದ್ದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕಂಪನಿಯೊಂದರ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿದಿರುವುದು ದಾಖಲಾಗಿದೆ. 
ಇನ್ಫಿಬೀಮ್ ಅವೆನ್ಯೂಸ್ ಕುರಿತು ಆತಂಕ ಮೂಡಿಸುವ ವಾಟ್ಸ್ ಆಪ್ ಮೆಸೇಜ್ ಗಳು ಹಲವು ತಿಂಗಳುಗಳಿಂದ ಹರಿದಾಡುತ್ತಿತ್ತು. ಬಡ್ಡಿ ರಹಿತ ಹಾಗೂ ಯಾವುದೇ ಆಧಾರ ಇಲ್ಲದೇ,  ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಋಣಾತ್ಮಕ ಆಸ್ತಿ ಹೊಂದಿರುವ ಸಂಸ್ಥೆಯ ಒಂದು ಯುನಿಟ್ ಗೆ ಸಾಲ ನೀಡಲಾಗಿದೆ.  ಅಷ್ಟೇ ಅಲ್ಲದೇ ಸಂಸ್ಥೆಯ ಸಹ ಸಂಸ್ಥಾಪಕ ಈಗ  ನಾನ್ ಪ್ರೊಮೋಟರ್ ಆಗಿದ್ದಾರೆ ಆದರೆ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ ಎಂದು ಮೆಸೇಜ್ ನಲ್ಲಿ ಆರೋಪಿಸಲಾಗಿತ್ತು, ಆದರೆ ಇನ್ವೆಸ್ಟರ್ ಬ್ಯಾಂಕ್ ಈಕ್ವಿರಸ್ ಕ್ಯಾಪಿಟಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com