ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಮಂಗಳವಾರ ಎಂಸಿಎಲ್‌ಆರ್‌ ದರವನ್ನು ಶೇ.0.50ರಷ್ಟು ಕಡಿಮೆ ಮಾಡಿರುವುದಾಗಿ ಘೋಷಿಸಿದ್ದು...
ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಮಂಗಳವಾರ ಎಂಸಿಎಲ್‌ಆರ್‌ ದರವನ್ನು ಶೇ.0.50ರಷ್ಟು ಕಡಿಮೆ ಮಾಡಿರುವುದಾಗಿ ಘೋಷಿಸಿದ್ದು, ಇದರಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಇಳಿಕೆಯಾಗಲಿದೆ
ಪರಿಷ್ಕೃತ ಎಂಸಿಎಲ್‌ಆರ್‌ ಶೇ. 8.55 ರಿಂದ ಶೇ. 8.5ಕ್ಕೆ ಕುಸಿಯಲಿದೆ. ಪರಿಣಾಮವಾಗಿ ಎಂಎಲ್‌ಸಿಆರ್‌ನೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಸಾಲಗಳ ಮೇಲಿನ ಬಡ್ಡಿ ದರ  ಏ.10, 2019ರಿಂದ 5 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಕೆಯಾಗಲಿದೆ.
30 ಲಕ್ಷ ರೂ.ವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು 10 ಬೇಸಿಸ್‌ ಪಾಯಿಂಟ್‌ನಷ್ಟು ಇಳಿಸಿದೆ.  ಈ ಸಾಲದ ಮೇಲಿನ ಬಡ್ಡಿ ದರ ಶೇ.8.6ರಿಂದ ಶೇ. 8.9ರಷ್ಟಾಗಲಿದೆ. ಪ್ರಸ್ತುತ ಈ ದರ ಶೇ.8.7ರಿಂದ ಶೇ.9ರಷ್ಟಿದೆ.
ಮೇ.1ರಿಂದ ಅನ್ವಯವಾಗುವಂತೆ ನಗದು ಸಾಲ ಅಥವಾ ಓವರ್‌ಡ್ರಾಫ್ಟ್‌ ದರವನ್ನು ಪರಿಷ್ಕರಿಸಿದೆ. ಜೊತೆಗೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನು 1 ಲಕ್ಷ ರೂ.ವರೆಗೆ ಶೇ. 3.5ಕ್ಕೆ ಹೆಚ್ಚಿಸಿದೆ. 1 ಲಕ್ಷ ರೂ. ಮೇಲ್ಪಟ್ಟು ಶೇ.3.25ಕ್ಕೆ ಏರಿಕೆ ಕಂಡಿದೆ.

Related Stories

No stories found.

Advertisement

X
Kannada Prabha
www.kannadaprabha.com