ಆರ್ಥಿಕ ಕುಸಿತಕ್ಕೆ ಆರ್ ಬಿಐ ಕ್ರಮ: ರೆಪೊ ದರ ಶೇಕಡಾ 5.40 ಕ್ಕೆ ಇಳಿಕೆ

ಸತತ ನಾಲ್ಕನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಇಳಿಸುವ ಮೂಲಕ ತನ್ನ ಪ್ರಮುಖ ಬಡ್ಡಿದರಗಳನ್ನು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಸತತ ನಾಲ್ಕನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರ ಇಳಿಸುವ ಮೂಲಕ ತನ್ನ ಪ್ರಮುಖ ಬಡ್ಡಿದರಗಳನ್ನು ಇಳಿಕೆ ಮಾಡಲಿದೆ. 
ಆರು ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ(ಎಂಪಿಸಿ) ಇಂದು ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ ಗಳಿಂದ ಶೇಕಡಾ 5.40ಗೆ ರೆಪೊ ದರ ಇಳಿಕೆ ಮಾಡಿದೆ. ಹಣಕಾಸಿನ ಮೌಲ್ಯ ಅಥವಾ ದರದಲ್ಲಿನ ಶೇಕಡಾವಾರು ಬದಲಾವಣೆಯನ್ನು ವಿವರಿಸಲು ಹಣಕಾಸಿನಲ್ಲಿ ಬಳಸುವ ಅಳತೆಯ ಘಟಕವನ್ನು ಬೇಸಿಸ್ ಪಾಯಿಂಟ್ ಎಂದು ಕರೆಯಲಾಗುತ್ತದೆ. 
ಇದಕ್ಕೂ ಹಿಂದಿನ ಮೂರು ವಿತ್ತೀಯ ನೀತಿಗಳಲ್ಲಿ ಪ್ರತಿಬಾರಿ 25 ಬೇಸಿಸ್ ಪಾಯಿಂಟ್ ಗಳಷ್ಟು ಆರ್ ಬಿಐ ಇಳಿಕೆ ಮಾಡಿತ್ತು. ಕಳೆದ ಜೂನ್ ವಿತ್ತೀಯ ನೀತಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು 2019-20ಕ್ಕೆ ಇಳಿಕೆಯಾಗಿ ಶೇಕಡಾ 7ರಿಂದ ಶೇಕಡಾ 6.9ಕ್ಕೆ ಇಳಿಕೆಯಾಗಿ ಪರಿಷ್ಕರಿಸಿತ್ತು.
ಹಣಕಾಸು ವರ್ಷ 20ರ ದ್ವಿತೀಯ ತ್ರೈಮಾಸಿಕದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಹಣದುಬ್ಬರವನ್ನು ಶೇಕಡಾ 3.1, 3.5 ಮತ್ತು 3.7 ಎಂದು ತೋರಿಸಲಾಗಿತ್ತು. 
ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನುಇಳಿಕೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com