ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಪತ್ರದ ವಿಚಾರ: ಅರ್ನ್ಸ್ಟ್ & ಯಂಗ್ ನಿಂದ ತನಿಖೆಗೆ ತೀರ್ಮಾನ

ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ....
ಕಾಫಿ ಡೇ
ಕಾಫಿ ಡೇ

ಚಿಕ್ಕಮಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ ಬರೆದಿರುವ ಪತ್ರದ ಕುರಿತಂತೆ  ತನಿಖೆ ನಡೆಸಲು ಅರ್ನ್ಸ್ಟ್ & ಯಂಗ್ (ಇವೈ ) ಅವರನ್ನು ನೇಮಕ ಮಾಡಿದೆ.

ಕಂಪನಿಯ ಮತ್ತು ಅದರ ಅಂಗಸಂಸ್ಥೆಗಳ ಖಾತೆಗಳ ಪುಸ್ತಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಇವೈಗೆ ಕೋರಲಾಗಿದೆ ಎಂದು ಕಾಫಿ ಡೇ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ ಸುಮಾರು ಗಂಟೆಗಳ ಸುದೀರ್ಘ ಕಾಲ ನಡೆದ ಮಂಡಳಿಯ ಸಭೆ ತರುವಾಯ ಈ ಹೇಳಿಕೆ ಬಿಡುಗಡೆಯಾಗಿದೆ.
"ಕಾರ್ಯತಂತ್ರದ ನಿರ್ದೇಶನ ಮತ್ತು ಭವಿಷ್ಯದಲ್ಲಿ ಸೂಕ್ತವಾದ ಮಾರ್ಗವನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಮಧ್ಯಸ್ಥಗಾರರಿಗೆ ಕೆಲಸ ನೀಡಬೇಕೆಂದು ಮಂಡಳಿ ನಿರ್ಧರಿಸಿದೆ. ಇದನ್ನು ಸಾಧಿಸಲು ಶ್ರೇಷ್ಠ ವ್ಯಕ್ತಿ ಅಥವಾ ಹೆಸರಾಂತ ಸಂಸ್ಥೆಯನ್ನು ಕಾರ್ಯತಂತ್ರದ ಸಾಂಸ್ಥಿಕ ಸಲಹೆಗಾರ / ಮಂಡಳಿಗೆ ನೇಮಕ ಮಾಡಲು ನಿರ್ಧರಿಸಲಾಯಿತು, ”ಎಂದು ಅದು ಹೇಳಿದೆ.
ಹಿಂದಿನ ಮಂಡಳಿ ಸಭೆಯಲ್ಲಿ ರಚಿಸಲಾದ ಕಾರ್ಯಕಾರಿ ಸಮಿತಿಯ ಹೆಚ್ಚುವರಿ ಸದಸ್ಯರಾಗಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ನೇಮಿಸಲಾಗಿತ್ತು.
ಆಡಳಿತ ಮಂಡಳಿ ಹಿರಿಯರು, ಆಡಿಟರ್​ಗಳು ಮತ್ತು ಮಂಡಳಿಯ ಗಮನಕ್ಕೆ ಬಾರದೆ ಇರುವ ಹಣಕಾಸು ವ್ಯವಹಾರಗಳು ಕುರಿತು ವಿ.ಜಿ.ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಅಂಶಗಳ ಕುರಿತಾಗಿ ಕಂಪನಿಯು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com