ವೊಡಾಫೋನ್ ಐಡಿಯಾ, ಏರ್ ಟೆಲ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ!

ವೊಡಾಫೋನ್ ಐಡಿಯಾ, ಏರ್ ಟೆಲ್ ನ ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದ್ದು, ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ. 
ವೊಡಾಫೋನ್ ಐಡಿಯಾ, ಏರ್ ಟೆಲ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ!
ವೊಡಾಫೋನ್ ಐಡಿಯಾ, ಏರ್ ಟೆಲ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ!
Updated on

ನವದೆಹಲಿ: ವೊಡಾಫೋನ್ ಐಡಿಯಾ, ಏರ್ ಟೆಲ್ ನ ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದ್ದು, ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ. 

ಹಿಂದೆಂದೂ ಕಾಣದ ನಷ್ಟವನ್ನು ಈ ಎರಡೂ ಸಂಸ್ಥೆಗಳು ಈಗ ಎದುರಿಸುತ್ತಿವೆ. ಜೊತೆಗೆ ಬೃಹತ್ ಪ್ರಮಾಣದ ಮೊತ್ತವನ್ನು ಬಾಕಿ ನೀಡುವ ಜವಾಬ್ದಾರಿ ಹೆಗಲೇರಿದೆ. ಪರಿಣಾಮವಾಗಿ ಉತ್ತಮ ಭವಿಷ್ಯ ಹುಡುಕುತ್ತಿರುವ ಉದ್ಯೋಗಿಗಳು ಹೊಸ ಉದ್ಯೋಗಗಳನ್ನು ಎದುರುನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. 
  
ತಜ್ಞ ಸಿಬ್ಬಂದಿ ಸಂಸ್ಥೆಯಾಗಿರುವ ಎಕ್ಸ್ಫೆನೋ ನೀಡಿರುವ ಮಾಹಿತಿಯ ಪ್ರಕಾರ ಕೆಲವು ವಾರಗಳಿಂದ ವೊಡಾಫೋನ್ ಐಡಿಯಾದಿಂದ 7,000 ಪ್ರೊಫೈಲ್ ಗಳು ಹಾಗೂ ಏರ್ ಟೆಲ್ ನಿಂದ 5,000 ಪ್ರೊಫೈಲ್ ಗಳು ಹೊಸ ಉದ್ಯೋಗಕ್ಕಾಗಿ ಜಾಬ್ ಪೋರ್ಟಲ್ ನಲ್ಲಿ ಅಪ್ ಲೋಡ್ ಆಗಿವೆ. ಅಂದರೆ ವೊಡಾಫೋನ್ ನ ಶೇ.70 ರಷ್ಟು ಹಾಗೂ ಏರ್ ಟೆಲ್ ನ ಶೇ.30 ರಷ್ಟು ಸಿಬ್ಬಂದಿಗಳು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com