ಭಾರತೀಯ ಮೂಲದ ಇಂದ್ರಾ ನೂಯಿಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ?

ಜಾಗತಿಕ ತಂಪು ಪಾನೀಯ ದೈತ್ಯ ಸಂಸ್ಥೆ ಪೆಪ್ಸಿ ಕೋನ ಅಧ್ಯಕ್ಷೆ ಇಂದ್ರಾ ನೂಯಿ ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆಯೆ? ಜಿಮ್​ ಯಂಗ್​ ಕಿಮ್​ ಅವರಿಂದ ತೆರವಾದ ಸ್ಥಾನಕ್ಕೆ.....
ಇಂದ್ರಾ ನೂಯಿ
ಇಂದ್ರಾ ನೂಯಿ
ನ್ಯೂಯಾರ್ಕ್: ಜಾಗತಿಕ ತಂಪು ಪಾನೀಯ ದೈತ್ಯ ಸಂಸ್ಥೆ ಪೆಪ್ಸಿ ಕೋನ ಅಧ್ಯಕ್ಷೆ ಇಂದ್ರಾ ನೂಯಿ  ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಏರಲಿದ್ದಾರೆಯೆ? ಜಿಮ್​ ಯಂಗ್​ ಕಿಮ್​ ಅವರಿಂದ ತೆರವಾದ ಸ್ಥಾನಕ್ಕೆ ಇಂದ್ರಾ ಅವರ ಹೆಸರನ್ನು ಶ್ವೇತಭವನ ಪರಿಗಣಿಸುತ್ತದೆ  ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
12 ವರ್ಷಗಳಿಂದ ಕಂಪೆನಿಯ ನೇತೃತ್ವ ವಹಿಸಿದ್ದ ನೊಯಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಪೆಪ್ಸಿಕೋ ಮುಖ್ಯಸ್ಥ ಸ್ಥಾನದಿಂಡ ನಿರ್ಗಮಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್​  ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಂದ್ರಾ ನೂಯಿ ಅವರ ಹೆಸರು ಸೂಚಿಸಿದ್ದಾರೆ ಎನ್ನಲಾಗಿದು ನೂಯಿ ಈ ನಾಮನಿರ್ದೇಶನದ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಿಮ್ ಬಳಿಕ ವಿಶ್ವಬ್ಯಾಂಕ್ ಅಧ್ಯಕ್ಷರಾಗಲು ಅಂತರಾಷ್ಟ್ರೀಯ ಮಟ್ಟದ ಹಲವರು ಆಸಕ್ತರಾಗಿದ್ದು ಈಗ ಟ್ರಂಪ್ ಪುತ್ರಿ ನೂಯಿ ಪರವಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನಕ್ಕೇರಲು ಸುಲಭವಾಗಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com