ಜೆಟ್ ಏರ್ ವೇಸ್ ನಲ್ಲಿ 700 ಕೋಟಿ ರು. ಹೂಡಿಕೆಗೆ ಮುಂದಾದ ನರೇಶ್ ಗೋಯಲ್

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ 700 ಕೋಟಿ ರುಪಾಯಿವರೆಗೆ ಹೂಡಿಕೆ ಮಾಡಲು ಸಿದ್ಧ...
ನರೇಶ್ ಗೋಯಲ್
ನರೇಶ್ ಗೋಯಲ್
ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ 700 ಕೋಟಿ ರುಪಾಯಿವರೆಗೆ ಹೂಡಿಕೆ ಮಾಡಲು ಸಿದ್ಧ. ಆದರೆ ನನ್ನ ಷೇರು ಶೇ.25 ಕ್ಕಿಂತ ಕಡಿಮೆ ಇರಬಾರದು ಎಂದು ಜೆಟ್ ಏರ್ ವೇಸ್ ಅಧ್ಯಕ್ಷ ನರೇಶ್ ಗೋಯಲ್ ಅವರು ಹೇಳಿದ್ದಾರೆ.
ಜೆಟ್ ಏರ್ ವೇಸ್ ಪಾಲುದಾರ ಎತಿಹಾದ್ ಗೋಯಲ್ ತಮ್ಮ ನಿಯಂತ್ರಣ ಬಿಟ್ಟುಕೊಡಬೇಕು ಎಂಬ ಷರತ್ತು ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ವಿಧಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನರೇಶ್ ಗೋಯಲ್ ಅವರು ಈ ಹೇಳಿಕೆ ನೀಡಿದ್ದಾರೆ.
ವಿಮಾನಯಾನ ಸಂಸ್ಥೆಯಲ್ಲಿ 700 ಕೋಟಿ ರುಪಾಯಿ ಹೂಡಿಕೆ ಮಾಡಲು ನಾನು ಬದ್ಧವಾಗಿದ್ದೇನೆ. ಆದರೆ ನನ್ನ ಪಾಲು ಕನಿಷ್ಠ ಶೇ.25 ರಷ್ಟು ಇರಬೇಕು ಎಂದು ಗೋಯಲ್ ಪ್ರತಿಪಾದಿಸಿದ್ದಾರೆ.
ಅಬುಧಾಬಿ ಮೂಲದ ಎತಿಹಾದ್‌, ಜೆಟ್‌ ಏರ್‌ ವೇಸ್ ನಲ್ಲಿರುವ ತನ್ನ ಷೇರನ್ನು ದುಪ್ಪಟ್ಟುಗೊಳಿಸುವ, ಅಂದರೆ ಷೇರು ಪ್ರಮಾಣವನ್ನು ಶೇ.49ಕ್ಕೇರಿಸುವ ಮೂಲಕ ಜೆಟ್‌ ಅನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಮುಂದಾಗಿದೆ.
ಪ್ರಸ್ತುತ ಎತಿಹಾದ್‌ ಜೆಟ್‌ ಏರ್‌ವೇಸ್ ನಲ್ಲಿ ಶೇ.24 ಷೇರುಗಳನ್ನು ಹೊಂದಿದೆ. ಈಗ ಎತಿಹಾದ್‌ ಷೇರು ಪ್ರಮಾಣ ಏರಿಸಿಕೊಂಡರೆ, ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ ಅವರು ಹೊಂದಿರುವ ಷೇರು ಪ್ರಮಾಣ ಶೇ.51ರಿಂದ ಶೇ.20ಕ್ಕಿಳಿಯಲಿದೆ ಮತ್ತು ಅವರು ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಹೀಗಾಗಿ ಕನಿಷ್ಠ ಶೇ.25ರಷ್ಟು ಷೇರು ಉಳಿಸಿಕೊಳ್ಳಲು ಗೋಯಲ್ ಯತ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com