ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಗೆ 353 ಕೋಟಿ ರು. ಮರುಪಾವತಿಸಬೇಕು

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರು ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಸಾಬೀತಾಗಿದ್ದು, ಈಗ ಅವರನ್ನು...
ಚಂದಾ ಕೊಚ್ಚಾರ್
ಚಂದಾ ಕೊಚ್ಚಾರ್
Updated on
ನವದೆಹಲಿ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರು ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಸಾಬೀತಾಗಿದ್ದು, ಈಗ ಅವರನ್ನು  ಐಸಿಐಸಿಐ ಬ್ಯಾಂಕ್ ಸೇವೆಯಿಂದಲೇ ವಜಾಗೊಳಿಸಲಾಗಿದೆ. ಹೀಗಾಗಿ ಅವರು 2009ರಿಂದ 2018ರ ವರೆಗೆ ಪಡೆದ ವೇತನ ಹಾಗೂ ಇತರೆ ಸೌಲಭ್ಯಗಳಿಗಾಗಿ ಪಡೆದ 353.16 ಕೋಟಿ ರುಪಾಯಿಯನ್ನು ಮರುಪಾವತಿಸಬೇಕಾಗಿದೆ.
ಚಂದಾ ಕೊಚ್ಚಾರ್ ಅವರು ಕಳೆದ ಒಂಬತ್ತು ವರ್ಷಗಳಲ್ಲಿ 9.4 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಪಡೆದಿದ್ದು, ಈಗ ಅದರ ಮೌಲ್ಯ 343.34 ಕೋಟಿ ರುಪಾಯಿ ಆಗಲಿದೆ. ಇನ್ನು ಕಾರ್ಯಕ್ಷಮತೆಯ ಬೋನಸ್ ಆಗಿ 9.8 ಕೋಟಿ ರುಪಾಯಿ ಪಡೆದಿದ್ದಾರೆ.
ಕೊಚ್ಚಾರ್ ಅವರು ಮೂಲ ವೇತನದ ಹೊರತಾಗಿ ಭತ್ಯೆ ಹಾಗೂ ಇತರೆ ಸೌಲಭ್ಯಗಳಿಗೆ 29.02 ಕೋಟಿ ರುಪಾಯಿ ತೆಗೆದುಕೊಂಡಿದ್ದು, ಅದನ್ನು ಈಗ ಮರುಪಾವತಿಸಬೇಕಾಗಿದೆ.
ಚಂದಾ ಕೊಚ್ಚಾರ್ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ ಅವರು ಬುಧವಾರ ವರದಿ ಸಲ್ಲಿಸಿದ್ದು, ಬ್ಯಾಂಕ್ ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ತನಿಖಾ ವರದಿಯನ್ನು ಆಧರಿಸಿ ಬ್ಯಾಂಕ್ ಮಂಡಳಿ, ಬ್ಯಾಂಕ್ ಆಂತರಿಕ ನಿಯಮಗಳ ಅಡಿ ಚಂದಾ ಕೊಚ್ಚರ್ ಅವರನ್ನು ಐಸಿಐಸಿಐಯಿಂದಲೇ ಹೊರ ಹಾಕಿದೆ. ಅಲ್ಲದೆ ಅವರ ವೇತನ, ಬೋನಸ್, ಮೆಡಿಕಲ್ ಸೌಲಭ್ಯಗಳು ಮತ್ತು ಷೇರು ಪಾಲುದಾರಿಕೆಯನ್ನು ಹಿಂಪಡೆಯಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com