ಸಾಗರೋತ್ತರ ಸಾಲ ಯೋಜನೆ ದೇಶಕ್ಕೆ ಅಪಾಯ: ರಘುರಾಮ್ ರಾಜನ್

ವಿದೇಶೀ ಕರೆನ್ಸಿ ರೂಪದಲ್ಲಿ ಸಾಲ ನೀಡುವ ಭಾರತದ ಯೋಜನೆಯ`ಿಂದ ಯಾವುದೇ ನೈಜ ಪ್ರಯೋಜನವಿಲ್ಲ. ಬದಲಿಗೆ ಇದು ಸಾಕಷ್ಟು ಅಪಾಯದಿಂದ ಕೂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ರಘುರಾಮ್ ರಾಜನ್
ರಘುರಾಮ್ ರಾಜನ್
ವಿದೇಶೀ ಕರೆನ್ಸಿ ರೂಪದಲ್ಲಿ ಸಾಲ ನೀಡುವ ಭಾರತದ ಯೋಜನೆಯ`ಿಂದ ಯಾವುದೇ ನೈಜ ಪ್ರಯೋಜನವಿಲ್ಲ. ಬದಲಿಗೆ ಇದು ಸಾಕಷ್ಟು ಅಪಾಯದಿಂದ ಕೂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಜಾಗತಿಕ ಬಾಂಡ್ ಮಾರಾಟವು ಸ್ಥಳೀಯ ಮಾರುಕಟ್ಟೆಯಲ್ಲಿನ ದೇಶೀಯ ಸರ್ಕಾರಿ ಬಾಂಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ ಎಂದು ಅವರು ನುಡಿದರು.. "ಭಾರತ ಆರ್ಥಿಕತೆ ಬಿಸಿ ಏರಿದ್ದಾಗ ಖರೀದಿಸುವ ಹುಡಿಕೆದಾರರು ಆ ಬಿಸಿ ತಣ್ಣಗಾಗುತ್ತಿದ್ದಂತೆ ಹಿಂದೆ ಸರಿಯುತ್ತಾರೆ" ಇದನ್ನು ನಾವು ಚಿಂತಿಸಬೇಕಿದೆ ಎಂದು ಶನಿವಾರ ಟೈಮ್ಸ್ ಆಫ್ ಇಂಡಿಯಾದ ಗೆ ಬರೆದ ಲೇಖನವೊಂದರಲ್ಲಿ ರಾಜನ್ ಹೇಳಿದ್ದಾರೆ.
ಹಣಕಾಸು ಸಚಿವೆ ರ್ಮಲಾ ಸೀತಾರಾಮನ್ ಈ ತಿಂಗಳ ಆರಂಭದಲ್ಲಿ ಘೋಷಿಸಿದ ಯೋಜನೆಗೆ ವಿರೋಧ ಹೆಚ್ಚುತ್ತಿದ್ದು ಇದಕ್ಕೀಗ ರಾಜನ್ ಸಹ ಸೇರ್ಪಡೆಯಾಗಿದ್ದಾರೆ. ನಿಧಾನಗತಿಯ ಆರ್ಥಿಕತೆಯು ತೆರಿಗೆ ಆದಾಯವನ್ನು ಕುಂಠಿತಗೊಳಿಸುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹಣವನ್ನು ಸಂಗ್ರಹಿಸಲು ದೇಶದಲ್ಲಿ ಬಾಂಡ್ ಮಾರಾಟಕ್ಕೆ ಸಿದ್ದವಾಗುತ್ತಿದ್ದಾರೆ. ಇದಕ್ಕಾಗಿ ವಿಶೇಷ ಯೋಜನೆ ಬಗೆಗೆ ಚರ್ಚೆ ನಡೆದಿದೆ. ಈ ಹಣಕಾಸು ವರ್ಷದಲ್ಲಿ ದಾಖಲೆಯ 7.1 ಟ್ರಿಲಿಯನ್ ರೂಪಾಯಿಗಳನ್ನು (3 103 ಬಿಲಿಯನ್) ಎರವಲು ಪಡೆಯುವ ಅವರ ಯೋಜನೆಗಳ ಬಗ್ಗೆ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ."ವಿದೇಶಿ ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸುವ ಭಾರತದ ಸಾಲದಲ್ಲಿನ ಚಂಚಲತೆಯು ನಮ್ಮ ದೇಶೀಯಮಾರುಕಟ್ಟೆಗೆ ಹರಡಬಹುದೇ? ವಿದೇಶಿ ಬಾಲವು ಸಾಕು ನಾಯಿಯನ್ನು ನಡೆಸುವುದೇ? ರಾಜನ್ ಹೇಳಿದರು. 
ಸರ್ಕಾರ ಪ್ರಸ್ಯುತ ನಗದು ಬಾಂಡ್ ಗಳ  ಹೂಡಿಕೆಯ ಮೇಲಿನ ಸುಧಾರಣಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.ಮೂರು ಮಾಜಿ ಕೇಂದ್ರ ಬ್ಯಾಂಕ್ ಅಧಿಕಾರಿಗಳು ಸಹ ಈ ಯೋಜನೆಯನ್ನು ವಿರೋಧಿಸಿದ್ದಾರೆ, ಭಾರತವು ಸಾಕಷ್ಟು ದೊಡ್ಡ ಬಜೆಟ್ ಕೊರತೆಯನ್ನು ಎದುರಿಸುತ್ತಿರುವುದರಿಂದ ಈ ಯೋಜನೆಗೆ ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದಾರೆ. ಭಾರತವು ಹಣಕಾಸಿನ ವರ್ಷದ ಬಜೆಟ್ ಕೊರತೆಯ ಗುರಿಯನ್ನು ಒಟ್ಟು ದೇಶೀಯ ಉತ್ಪನ್ನದ 3.3% ಎಂದು ನಿಗದಿಪಡಿಸಿದೆ, ಇದು ಫೆಬ್ರವರಿ ಮಧ್ಯಂತರ ಯೋಜನೆಯಲ್ಲಿ ಅಂದಾಜು ಮಾಡಿದ 3.4% ಗಿಂತ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com