ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆದಾಯ ತೆರಿಗೆ ವಿವರ ಸಲ್ಲಿಸುವ ದಿನಾಂಕ ಆಗಸ್ಟ್ 31ಕ್ಕೆ ವಿಸ್ತರಣೆ

2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು(ಐಟಿಆರ್) ಸಲ್ಲಿಸುವ ಅವಧಿಯನ್ನು ...
Published on
ನವದೆಹಲಿ: 2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು(ಐಟಿಆರ್) ಸಲ್ಲಿಸುವ ಅವಧಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಆಗಸ್ಟ್ 31ರವರೆಗೆ ವಿಸ್ತರಿಸಿದೆ.
ವೇತನ ತೆರಿಗೆ ಪಾವತಿದಾರರು, ಸಂಸ್ಥೆ, ಕಂಪೆನಿಗಳು 2018-19ನೇ ಸಾಲಿನ ಆದಾಯ ತೆರಿಗೆ ವಿವರಗಳನ್ನು ಈ ತಿಂಗಳ 31ರೊಳಗೆ ಸಲ್ಲಿಸಬೇಕಾಗಿತ್ತು. 
ಇದೀಗ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಆದಾಯ ತೆರಿಗೆ ಸಲ್ಲಿಕೆ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷದ ಟಿಡಿಎಸ್ ಪ್ರತಿ ಸಿಗುವುದು ವಿಳಂಬವಾಗಿರುವುದರಿಂದ ಐಟಿಆರ್ ದಿನಾಂಕವನ್ನು ವಿಸ್ತರಿಸಬೇಕೆಂದು ಜನರಿಗೆ ಬೇಡಿಕೆ ಕೇಳಿಬಂದಿತ್ತು. 
ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಕಳೆದ ಸಾಲಿನ ಟಿಡಿಎಸ್ ಪ್ರಮಾಣಪತ್ರದ ಫಾರ್ಮ್ 16 ನೀಡುವ ಕಡೆಯ ದಿನಾಂಕವನ್ನು ಜುಲೈ 10ರವರೆಗೆ ವಿಸ್ತರಿಸಿತ್ತು. ಇದರಿಂದಾಗಿ ಆದಾಯ ತೆರಿಗೆ ವಿವರ ಸಲ್ಲಿಸುವ ವೇತನ ಉದ್ಯೋಗಿಗಳಿಗೆ ತೆರಿಗೆ ವಿವರ ಸಲ್ಲಿಸಲು ಕೇವಲ 20 ದಿನಗಳ ಅವಕಾಶ ಮಾತ್ರ ಸಿಕ್ಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com