ವಾಣಿಜ್ಯ ವಹಿವಾಟು: ಏಪ್ರಿಲ್ ನಲ್ಲಿ ಶೇ 2.92 ತಲುಪಿದ ಚಿಲ್ಲರೆ ಹಣದುಬ್ಬರ

ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2.92ರಷ್ಟು ಏರಿಕೆ ಕಂಡಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂಡಾಗಿ ಈ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2.92ರಷ್ಟು ಏರಿಕೆ ಕಂಡಿದೆ. ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂಡಾಗಿ ಈ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಇದಕ್ಕೆ ಹಿಂದೆ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ಶೇ. 2.86 ರಷ್ಟಿತ್ತು. ಅಲ್ಲದೆ ಕಳೆದ ಏಪ್ರಿಲ್ 2018 ರಲ್ಲಿ 4.58 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಅಂಕಿಅಂಶಗಳ ಕಚೇರಿ (ಸಿಎಸ್ಒ) ವರದಿ ಹೇಳಿದೆ.
ಅಂಕಿ ಅಂಶಗಳ ಪ್ರಕಾರ ಏಪ್ರಿಲ್ ನಲ್ಲಿ ಆಹಾರ ಹಣದುಬ್ಬರವು ಶೇ. 1.1 ರಷ್ಟು ಇತ್ತು.ಮಾರ್ಚ್ ನಲ್ಲಿ ಇದು ಶೇ. 0.3 ಆಗಿತ್ತು. 
ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯವಾಗಿ ಸಿಪಿಐ ಆಧಾರಿತ ಹಣದುಬ್ಬರದಲ್ಲಿನ ಅಂಶಗಳನ್ನಾಧರಿಸಿ ಅದರ ವಿತ್ತೀಯ ನೀತಿಯನ್ನು ರೂಪಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com