ಭಾರತೀಯ ಐಟಿ ಕಂಪೆನಿಗಳ ಮೇಲೆ ಅಮೆರಿಕಾ ಮತ್ತೆ ಪ್ರಹಾರ: ಹೆಚ್-1ಬಿ ವೀಸಾ ನಿರಾಕರಣೆ ಶೇ.24ಕ್ಕೆ ಹೆಚ್ಚಳ 

ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತದಲ್ಲಿರುವ ಹೆಚ್ಚು ಕಟ್ಟುನಿಟ್ಟಿನ ನಿಯಮಗಳಿಂದಾಗಿ ಹೆಚ್-1ಬಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದವರಲ್ಲಿ ಅನೇಕ ಮಂದಿ ವೀಸಾ ಸಿಕ್ಕಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರದ ಆಡಳಿತದಲ್ಲಿರುವ ಹೆಚ್ಚು ಕಟ್ಟುನಿಟ್ಟಿನ ನಿಯಮಗಳಿಂದಾಗಿ ಹೆಚ್-1ಬಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದವರಲ್ಲಿ ಅನೇಕ ಮಂದಿಗೆ ವೀಸಾ ಸಿಕ್ಕಿಲ್ಲ.


2015ರಲ್ಲಿ ಶೇಕಡಾ 6ರಷ್ಟು ಮಂದಿಗೆ ಹೆಚ್-1ಬಿ ವೀಸಾ ನಿರಾಕರಿಸಿದ್ದರೆ ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಈ ಸಂಖ್ಯೆ ಶೇಕಡಾ 24ಕ್ಕೇರಿದೆ ಎಂದು ಅಮೆರಿಕಾದ ಥಿಂಕ್-ಟ್ಯಾಂಕ್ ಹೇಳಿದೆ.


ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಯುಎಸ್ ನಾಗರಿಕತ್ವ ಮತ್ತು ವಲಸೆ ಸೇವೆಗಳು ಒದಗಿಸಿದ ಅಂಕಿಅಂಶಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಿದೆ. ಪ್ರಮುಖ ಭಾರತೀಯ ಐಟಿ ಕಂಪೆನಿಗಳಿಗೆ ಹೆಚ್-1ಬಿ ವೀಸಾ ನಿರಾಕರಣೆ ಸಂಖ್ಯೆ ಹೆಚ್ಚಾಗಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರ ಭಾರತೀಯ ಕಂಪೆನಿಗಳನ್ನು ಹೆಚ್ಚಾಗಿ ಗುರಿಯಾಗಿಟ್ಟುಕೊಂಡಿದೆ ಎಂಬ ಅಪವಾದಗಳಿಗೆ ಈ ಅಂಕಿಅಂಶ ಪುಷ್ಟಿ ನೀಡುತ್ತಿದೆ. 


2015ರಲ್ಲಿ ಹೆಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಿದ ಅಮೆಜಾನ್, ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಗೂಗಲ್ ಕಂಪೆನಿಗಳಿಗೆ ಶೇಕಡಾ 1ರಷ್ಟು ಮಾತ್ರ ವೀಸಾ ನಿರಾಕರಣೆ ಮಾಡಲಾಗಿತ್ತು. 2019ರಲ್ಲಿ ಅದೇ ಕಂಪೆನಿಗಳ ಉದ್ಯೋಗಿಗಳಿಗೆ ವೀಸಾ ನಿರಾಕರಣೆ ಪ್ರಮಾಣ ಶೇಕಡಾ 6, ಶೇಕಡಾ 8, ಶೇಕಡಾ 7 ಮತ್ತು ಶೇಕಡಾ 3ರಷ್ಟಾಗಿದೆ. ಆಪಲ್ ಕಂಪೆನಿಗೆ ವೀಸಾ ನೀಡಿಕೆ ನಿರಾಕರಣೆ ಪ್ರಮಾಣ 2015ರಲ್ಲಿ ಇದ್ದ ಶೇಕಡಾ 2ರಷ್ಟೇ ಪ್ರಮಾಣ ಈಗಲೂ ಇದೆ.


ಟೆಕ್ ಮಹೀಂದ್ರಾ ಕಂಪೆನಿ ನೌಕರರಿಗೆ ಹೆಚ್-1ಬಿ ವೀಸಾ ನಿರಾಕರಣೆ ಪ್ರಮಾಣ ಶೇಕಡಾ 41ರಷ್ಟು, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಶೇಕಡಾ 34, ವಿಪ್ರೊ ಶೇಕಡಾ 53 ಮತ್ತು ಇನ್ಫೊಸಿಸ್ ನಲ್ಲಿ ಶೇಕಡಾ 45ರಷ್ಟು ಏರಿಕೆಯಾಗಿದೆ. ಅದೇ ಅಮೆರಿಕಾದ ಕಂಪೆನಿಗಳ ನೌಕರರಿಗೆ ಹೆಚ್ -1ಬಿ ವೀಸಾ ನೀಡಿಕೆ ಪ್ರಮಾಣ ಜಾಸ್ತಿಯಾಗಿದೆ.


ಉದಾಹರಣೆಗೆ ಅಮೆರಿಕಾದ ಪ್ರಮುಖ ಕಂಪೆನಿಗಳಾದ ಅಮೆಜಾನ್  ಕಂಪೆನಿ ನೌಕರರಿಗೆ ಹೆಚ್-1ಬಿ ವೀಸಾ ನೀಡಿಕೆ ಪ್ರಮಾಣ 2015ರಲ್ಲಿ ಶೇಕಡಾ 1ರಷ್ಟಿದ್ದರೆ ಅದೀಗ ಶೇಕಡಾ 3ಕ್ಕೆ ಏರಿಕೆಯಾಗಿದೆ. ಮೈಕ್ರೊಸಾಫ್ಟ್ ನಲ್ಲಿ ಶೇಕಡಾ 2ರಷ್ಟು, ಇಂಟೆಲ್ ನಲ್ಲಿ ಶೇಕಡಾ 1ರಿಂದ ಶೇಕಡಾ 3ಕ್ಕೆ ಏರಿಕೆಯಾಗಿದೆ. ಆಪಲ್ ಮತ್ತು ಗೂಗಲ್ ಕಂಪೆನಿಗಳಲ್ಲಿ ಶೇಕಡಾ 0.4ರಿಂದ ಶೇಕಡಾ 1ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com