ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?

ದೇಶದ ಮೊದಲ ಖಾಸಗಿ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ಐಆರ್ ಸಿಟಿಸಿಯ ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭದ ಅಂಕಿ-ಅಂಶಗಳು ಪ್ರಕಟವಾಗಿವೆ. 
ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?
ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?

ನವದೆಹಲಿ: ದೇಶದ ಮೊದಲ ಖಾಸಗಿ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ಐಆರ್ ಸಿಟಿಸಿಯ ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭದ ಅಂಕಿ-ಅಂಶಗಳು ಪ್ರಕಟವಾಗಿವೆ. 

ಮೊದಲ ತಿಂಗಳಲ್ಲಿ ಟಿಕೆಟ್ ಮಾರಾಟದ ಮೂಲಕ ಸುಮಾರು 3.70 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಅಕ್ಟೋಬರ್ ವರೆಗೂ ಅಂದಾಜು 70 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ. 

ಲಖನೌ-ದೆಹಲಿ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ಐಆರ್ ಸಿಟಿಸಿಯದ್ದಾಗಿದೆ. ಐಆರ್ ಸಿಟಿಸಿ ನಿರ್ವಹಣೆಯ ಜಾಲದಲ್ಲಿ 50 ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸಿ, 150 ಖಾಸಗಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಯೋಜನೆಯ ಭಾಗವಾಗಿ ಬಂದಿರುವುದಾಗಿದೆ.  

ರೈಲಿನ ಒಟ್ಟು ಸಾಮರ್ಥ್ಯದಲ್ಲಿ ಸರಾಸರಿ ಶೇ.80-85 ರಷ್ಟು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಾರೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ವಾರದಲ್ಲಿ 6 ದಿನಗಳು ರೈಲು ಸಂಚರಿಸುವ ರೈಲಿಗೆ ಅ.5 ರಿಂದ 28 ರವರೆಗೆ ಪ್ರತಿನಿತ್ಯದ ಆಧಾರದಲ್ಲಿ 14 ಲಕ್ಷ ರೂಪಾಯಿಯಂತೆ ಖರ್ಚು-ವೆಚ್ಚಗಳಾಗಿದ್ದು ಐಆರ್ ಸಿಟಿಸಿ ಈ ವರೆಗೂ ಒಟ್ಟಾರೆ 3 ಕೋಟಿ ರೂಪಾಯಿ ಖರ್ಚು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com