ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೈಗಾರಿಕಾ ಉತ್ಪಾದನೆ ಪ್ರಮಾಣ 8 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ

ಬಂಡವಾಳ ಸರಕು, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಗಣನೀಯ ಕುಸಿತದೊಂದಿಗೆ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
Published on

ನವದೆಹಲಿ: ಬಂಡವಾಳ ಸರಕು, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಗಣನೀಯ ಕುಸಿತದೊಂದಿಗೆ ದೇಶದ ಕೈಗಾರಿಕಾ ಉತ್ಪಾದನೆ ಪ್ರಮಾಣ ಎಂಟು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ರಾಷ್ಟ್ರೀಯ ಅಂಕಿ-ಸಂಖ್ಯೆಗಳ ಕಚೇರಿ(ಎನ್‌ಎಸ್‌ಓ) ಸೋಮವಾರ ಬಿಡುಗಡೆ ಮಾಡಿದ ವರದಿ ಅನ್ವಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಸೆಪ್ಟೆಂಬರ್‌ನಲ್ಲಿ ಶೇ. 4.3% ಇಳಿದಿದೆ. ಆಗಸ್ಟ್‌ ನಲ್ಲಿ ಶೇ. 1.4% ಕುಸಿತ ಕಂಡ ಬಳಿಕ ಸತತ ಎರಡನೇ ತಿಂಗಳು ಕೂಡಾ ಸೂಚ್ಯಂಕ ಇಳಿಕೆ ಕಂಡಿದೆ.

2011ರ ಅಕ್ಟೋಬರ್‌ನಲ್ಲಿ ಶೇ 5ರಷ್ಟು ಕುಸಿತ ಕಂಡಿದ್ದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ(ಐಐಪಿ), ಈಗ ಸತತ ಎರಡನೇ ತಿಂಗಳೂ ಕುಸಿತ ದಾಖಲಿಸಿದೆ. ಎಂಟು ವರ್ಷಗಳಲ್ಲಿನ ಅತ್ಯಂತ ಕಳಪೆ ಪ್ರದರ್ಶನ ದಾಖಲಿಸಿದೆ. ಭಾರಿ ಯಂತ್ರೋಪಕರಣ, ಗೃಹೋಪಯೋಗಿ ಸಲಕರಣೆ, ಮೂಲಸೌಕರ್ಯ ಮತ್ತು ನಿರ್ಮಾಣ ವಲಯದ ಸರಕುಗಳ ತಯಾರಿಕೆಯು ಕುಸಿದಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು ಹಾಗೂ ಸಿಮೆಂಟ್ ಸೇರಿದಂತೆ ಎಂಟು ಪ್ರಮುಖ ವಲಯಗಳ ಕೊಡುಗೆ ಶೇ.40ರಷ್ಟು ಇದ್ದು, ಈ ಎಲ್ಲಾ ವಲಯಗಳಲ್ಲೂ ಎಂಟು ವರ್ಷಗಳಲ್ಲೇ ಗರಿಷ್ಠ ಕುಸಿತ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ತೀವ್ರ ಆರ್ಥಿಕ ಹಿಂಜರಿತದ ಲಕ್ಷಣ ಕಾಣಿಸಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com