ದೇಶ 2ಜಿ-ಮುಕ್ತವಾದರೆ ಮಾತ್ರ ‘ಡಿಜಿಟಲ್ ಇಂಡಿಯಾ’ ನಿರ್ಮಾಣ ಸಾಧ್ಯ: ರಿಯಲನ್ಸ್ ಜಿಯೋ

ಭಾರತ ವಿಶ್ವದ ಅತಿದೊಡ್ಡ ಡೇಟಾ-ಮಾರುಕಟ್ಟೆಯಾಗಿ ಬೆಳೆಯುವುದನ್ನು ಜಿಯೋ ಸಾಧ್ಯವಾಗಿಸಿದ್ದು, 2016ರಲ್ಲಿ ತಿಂಗಳಿಗೆ 20 ಕೋಟಿ ಜಿಬಿಯಷ್ಟಿದ್ದ ನಮ್ಮ ಡೇಟಾ ಬಳಕೆ ಇದೀಗ ತಿಂಗಳಿಗೆ 600 ಕೋಟಿ ಜಿಬಿಗೆ ಹೆಚ್ಚಿದೆ ಎಂದು ರಿಯಲನ್ಸ್ ಜಿಯೋ ತಿಳಿಸಿದೆ.
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ
Updated on

ಮುಂಬೈ: ಭಾರತ ವಿಶ್ವದ ಅತಿದೊಡ್ಡ ಡೇಟಾ-ಮಾರುಕಟ್ಟೆಯಾಗಿ ಬೆಳೆಯುವುದನ್ನು ಜಿಯೋ ಸಾಧ್ಯವಾಗಿಸಿದ್ದು, 2016ರಲ್ಲಿ ತಿಂಗಳಿಗೆ 20 ಕೋಟಿ ಜಿಬಿಯಷ್ಟಿದ್ದ ನಮ್ಮ ಡೇಟಾ ಬಳಕೆ ಇದೀಗ ತಿಂಗಳಿಗೆ 600 ಕೋಟಿ ಜಿಬಿಗೆ ಹೆಚ್ಚಿದೆ ಎಂದು ರಿಯಲನ್ಸ್ ಜಿಯೋ ತಿಳಿಸಿದೆ.

ಎಲ್ಲರನ್ನೂ ಮತ್ತು ಎಲ್ಲವನ್ನೂ ಎಲ್ಲೆಡೆಗೆ ಸಂಪರ್ಕಿಸುವ ಉದ್ದೇಶ ಹೊಂದಿರುವ ರಿಲಯನ್ಸ್ ಜಿಯೋ ಸಂಪೂರ್ಣ 4ಜಿ ಮೊಬೈಲ್ ಡೇಟಾ ಜಾಲವು ವಿಶ್ವದಲ್ಲೇ ಅಗ್ರಗಣ್ಯವಾಗಿದ್ದು, ಯಾವಾಗಲೂ ಅತ್ಯುನ್ನತ ಗುಣಮಟ್ಟ ಹಾಗೂ ಅತ್ಯುತ್ತಮ ದರಗಳನ್ನು ನೀಡುತ್ತದೆ. ಇತ್ತೀಚಿನ ತಂತ್ರಜ್ಞಾನಗಳಲ್ಲಿ ನಿರಂತರ ಹೂಡಿಕೆಯ ಮೂಲಕ ಜಿಯೋ ಭಾರತೀಯ ಬಳಕೆದಾರರಿಗೆ ಯಾವಾಗಲೂ ಅತ್ಯುನ್ನತ ಅನುಭವವನ್ನು ಕೈಗೆಟುಕುವ ದರಗಳಲ್ಲಿ ನೀಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ಡೇಟಾ-ಕೇಂದ್ರಿತ ತಂತ್ರಜ್ಞಾನಗಳ ಯುಗಕ್ಕೆ ಪ್ರವೇಶ ಮಾಡುವ ಮೂಲಕ ಜಿಯೋ ಭಾರತೀಯ ಟೆಲಿಕಾಮ್ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ ಮತ್ತು ಭಾರತವನ್ನು ಜಾಗತಿಕ ಡಿಜಿಟಲ್ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮತ್ತು ಆ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುವ ಸಂಸ್ಥೆಯಾಗಿ, ಇಂದು ಭಾರತೀಯ ಆರ್ಥಿಕತೆ ಮತ್ತು ಸಮಾಜದಲ್ಲಿ ದೂರಸಂಪರ್ಕ ಹಾಗೂ ಡಿಜಿಟಲ್ ಸೇವೆಗಳು ವಹಿಸುತ್ತಿರುವ ಪರಿವರ್ತಕ ಪಾತ್ರವನ್ನು ಜಿಯೋ ಚೆನ್ನಾಗಿ ಅರ್ಥಮಾಡಿಕೊಂಡಿದೆ ಎಂದು ಅದು ಹೇಳಿದೆ.

ದೇಶಾದ್ಯಂತ ಡೇಟಾ ಬಳಕೆ ಮತ್ತು 4ಜಿ ವ್ಯಾಪ್ತಿ ನಂಬಲಾಗದ ಪ್ರಮಾಣದಲ್ಲಿ ಬೆಳೆದಿದ್ದರೂ, 40 ಕೋಟಿಗೂ ಹೆಚ್ಚಿನ ಭಾರತೀಯ ಬಳಕೆದಾರರು ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಪ್ರಯೋಜನವನ್ನು ಇನ್ನೂ ಪಡೆದುಕೊಂಡಿಲ್ಲ. ಸಾಧ್ಯವಾದಷ್ಟೂ ಕಡಿಮೆ ಸಮಯದಲ್ಲಿ ಭಾರತವನ್ನು “2ಜಿ-ಮುಕ್ತ”ವನ್ನಾಗಿ ಮಾಡಿದರೆ ಮಾತ್ರ ‘ಡಿಜಿಟಲ್ ಇಂಡಿಯಾ’ ಯೋಜನೆಯ ಮಹತ್ವಾಕಾಂಕ್ಷಿ ಉದ್ದೇಶಗಳನ್ನು ಸಾಧಿಸಬಹುದು ಎಂದು ನಾವು ನಂಬುತ್ತೇವೆ. ಸರ್ಕಾರ ಮತ್ತು ಟ್ರಾಯ್ ಇದನ್ನು ಕಾರ್ಯನೀತಿಯ ಮೂಲಕ ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಉದ್ದಿಮೆಯ ಮಟ್ಟದಲ್ಲಿ ನಿರಂತರ ಹೂಡಿಕೆ ಅಗತ್ಯ. ಭಾರತೀಯ ನಾಗರಿಕರು ಅಪೇಕ್ಷಿಸುವ ಮಟ್ಟಕ್ಕೆ ತಲುಪಲು ಮತ್ತು ರಾಷ್ಟ್ರದ ಡಿಜಿಟಲ್ ಕಾರ್ಯಸೂಚಿಯನ್ನು ಪೂರೈಸಲು ಇಡೀ ಉದ್ದಿಮೆ ಒಟ್ಟಾಗಿ ಮುಂದೆಬಂದು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದೆ.

ಡಿಜಿಟಲ್ ಇಂಡಿಯಾ ಇಕೋಸಿಸ್ಟಂ ಅನ್ನು ಅನುಭವಿಸಲು ಮತ್ತು ಅದರಲ್ಲಿ ಸಂಪೂರ್ಣವಾಗಿ ಭಾಗವಹಿಸಲು 40 ಕೋಟಿ 2ಜಿ ಗ್ರಾಹಕರನ್ನು ಕರೆತರಬೇಕಾಗಿದೆ. ಬಳಕೆದಾರ-ಕೇಂದ್ರಿತ ಸಂಸ್ಥೆಯಾಗಿ ನಮ್ಮ ಎಲ್ಲ ಜಿಯೋ ಬಳಕೆದಾರರಿಗೆ ಅತ್ಯುತ್ತಮ ಗುಣಮಟ್ಟ ಹಾಗೂ ಬಳಕೆದಾರ ಅನುಭವ ನೀಡಬೇಕು. ಕೈಗೆಟುಕುವ ದರದ ಸೇವೆಗಳು ಮತ್ತು ಉತ್ಪನ್ನಗಳನ್ನು ಭಾರತೀಯ ಬಳಕೆದಾರರಿಗೆ ಒದಗಿಸಲು ಡಿಜಿಟಲ್ ಇಕೋಸಿಸ್ಟಂನಲ್ಲಿ ನಿರಂತರವಾಗಿ ಹೊಸತನವನ್ನು ತರಬೇಕು, ಯಾವಾಗಲೂ ನಿಯಂತ್ರಣ ಪ್ರಾಧಿಕಾರದ ಸೂಚನೆಗಳನ್ನು ಅನುಸರಿಸುವುದು, ಹಾಗೂ ಟೆಲಿಕಾಂ ವಲಯವನ್ನು ಭಾರತೀಯ ಆರ್ಥಿಕತೆಯ ಒಂದು ರೋಮಾಂಚಕ ಭಾಗವಾಗಿ ಮತ್ತು ನಮ್ಮ ದೇಶದ ಬೆಳವಣಿಗೆಗೆ ಪ್ರಮುಖ ಚಲನ ಸಾಧನವಾಗಿ ಇರಿಸಲು ಉದ್ದಿಮೆಯೊಡನೆ ಕೆಲಸಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಸ್ಥಿರ ವಲಯಕ್ಕೆ ತನ್ನ ಬದ್ಧತೆಯನ್ನು ಖಾತರಿಪಡಿಸುತ್ತಲೇ, ಗುಣಮಟ್ಟ ಮತ್ತು ಸೇವೆಯ ಆಧಾರದ ಮೇಲೆ ಜಿಯೋ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ ಹಾಗೂ ಬಳಕೆದಾರ-ಕೇಂದ್ರಿತ ಸಂಸ್ಥೆಯಾಗಿ ನಾವು ನಮ್ಮೆಲ್ಲ ಬಳಕೆದಾರರಿಗೆ ಯಾವಾಗಲೂ ಅತ್ಯುತ್ತಮ ಸೇವೆಯನ್ನು ಒದಗಿಸುತ್ತೇವೆ. ಜಿಯೋ ಯಾವಾಗಲೂ ಎಲ್ಲದರ ಕೇಂದ್ರದಲ್ಲೂ ಗ್ರಾಹಕರನ್ನು ಇರಿಸುತ್ತದೆ ಮತ್ತು ಗ್ರಾಹಕರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ. ವಿಶ್ವದ ಅತಿದೊಡ್ಡ ಡೇಟಾ ಮಾರುಕಟ್ಟೆಯಾಗಿ ತನ್ನ ಜಾಗತಿಕ ನಾಯಕತ್ವವನ್ನು ಉಳಿಸಿಕೊಳ್ಳಲು ಭಾರತಕ್ಕೆ ನೆರವಾಗಲು ಜಿಯೋ ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com