ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ!
ವಾಣಿಜ್ಯ
ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕುಸಿತ!
ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕಳೆದ ತಿಂಗಳಿಗಿಂತ ಕುಸಿತ ಕಂಡಿದ್ದು 91,916 ಕೋಟಿ ರೂಪಾಯಿಯಷ್ಟು ಸಂಗ್ರಹವಾಗಿದೆ.
ನವದೆಹಲಿ: ಸೆಪ್ಟೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ ಕಳೆದ ತಿಂಗಳಿಗಿಂತ ಕುಸಿತ ಕಂಡಿದ್ದು 91,916 ಕೋಟಿ ರೂಪಾಯಿಯಷ್ಟು ಸಂಗ್ರಹವಾಗಿದೆ.
ಕಳೆದ ತಿಂಗಳು 98,202 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅ.1 ರಂದು ಸರ್ಕಾರ ಜಿಎಸ್ ಟಿ ಸಂಗ್ರಹದ ಬಗ್ಗೆ ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, ಒಟ್ಟಾರೆ 91,916 ಕೋಟಿ ರೂಪಾಯಿಗಳ ಪೈಕಿ ಸಿಜಿಎಸ್ ಟಿ 16,630 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 22, 598 ಕೋಟಿ ರೂಪಾಯಿ, ಐಜಿಎಸ್ ಟಿ ರೂಪಾಯಿ.45,069 ಕೋಟಿ ರೂಪಾಯಿ ( ಆಮದು ಮೇಲಿನ ಸಂಗ್ರಹ 22,097 ಕೋಟಿ ರೂಪಾಯಿ ಸೇರಿಸಿ) ಸೆಸ್ 7,620 ಕೋಟಿ ರೂಪಾಯಿ (ಆಮದು ಮೊತ್ತ 728 ಕೋಟಿ ರೂಪಾಯಿ ಸೇರಿಸಿ) ಸಂಗ್ರಹವಾಗಿದೆ.
ಆಗಸ್ಟ್ ತಿಂಗಳ (ಸೆ.30 ವರೆಗೂ ಸಲ್ಲಿಕೆಯಾಗಿರುವ) ಜಿಎಸ್ ಟಿಆರ್ 3B ರಿಟರ್ನ್ಸ್ ಗಾಗಿ 75.94 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ, ಒಟ್ಟಾರೆ ಜಿಎಸ್ ಟಿ ಸಂಗ್ರಹದಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಶೇ.2.67 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ