ರೋಸ್ ವ್ಯಾಲಿ ಚಿಟ್ ಫಂಡ್ ಹಗರಣ: ಇಡಿಯಿಂದ ಕೆಕೆಆರ್ ಸಿಇಒ ವೆಂಕಿ ಮೈಸೂರು ವಿಚಾರಣೆ

ಐಪಿಎಲ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಿಇಒ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಲೀಕರನ್ನು  ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ.ಐಪಿಎಲ್ ತಂಡವನ್ನು ಪ್ರಾಯೋಜಿಸಿದ ರೋಸ್ ವ್ಯಾಲಿ ಗ್ರೂಪ್ ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದ ಸಂಬಂಧ ಇವರನ್ನು ಪ್ರಶ್ನಿಸಲಾಗಿದೆ.
ವೆಂಕಿ ಮೈಸೂರು
ವೆಂಕಿ ಮೈಸೂರು
Updated on

ಕೋಲ್ಕತ್ತಾ: ಐಪಿಎಲ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಿಇಒ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಲೀಕರನ್ನು  ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ.ಐಪಿಎಲ್ ತಂಡವನ್ನು ಪ್ರಾಯೋಜಿಸಿದ ರೋಸ್ ವ್ಯಾಲಿ ಗ್ರೂಪ್ ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದ ಸಂಬಂಧ ಇವರನ್ನು ಪ್ರಶ್ನಿಸಲಾಗಿದೆ.

"ಕೆಕೆಆರ್‌ನೊಂದಿಗಿನ ಪ್ರಾಯೋಜಕತ್ವದ ಒಪ್ಪಂದದ ಬಗ್ಗೆ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿವೆಂಕಿ ಮೈಸೂರ್ ಅವರನ್ನು ಪ್ರಶ್ನಿಸಲಾಗಿದೆ" ಹಿರಿಯ ಇಡಿ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ಹೇಳಿದ್ದಾರೆ.

ಕೆಕೆಆರ್ ಮತ್ತು ಗೌತಮ್ ಕುಂದು ಅವರ ರೋಸ್ ವ್ಯಾಲಿ ಗ್ರೂಪ್ ನಡುವಿನ ಪ್ರಾಯೋಜಕತ್ವದ ಒಪ್ಪಂದದ ಬಗ್ಗೆ ಮೈಸೂರ್ ಅವರನ್ನು ಪ್ರಶ್ನಿಸಲಾಗಿದೆ.. ಕೆಕೆಆರ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಒಡೆತನದಲ್ಲಿದೆ, ಇದಕ್ಕೆ ಶಾರುಖ್ ಖಾನ್ ಹಾಗೂ ಜೂಹಿ ಚಾವ್ಲಾ ಪ್ರಚಾರಕರಾಗಿದ್ದಾರೆ.ಇಡಿ ಅಧಿಕಾರಿಗಳ ಅನುಸಾರ ಕುಂಡು ನೇತೃತ್ವದ ಗುಂಪು ಕೆಕೆಆರ್‌ಗೆ ಪ್ರಾಯೋಜಕತ್ವಕ್ಕಾಗಿ ಹಲವಾರು ಕೋಟಿ ಪಾವತಿಸಿತ್ತು. ಇದಕ್ಕೆ ಪ್ರತಿಯಾಗಿ, ಶಾರುಖ್ ಖಾನ್ ಅವರು 2012 ಮತ್ತು 2013 ರಲ್ಲಿ ಪಶ್ಚಿಮ ಬಂಗಾಳದ ರೋಸ್ ವ್ಯಾಲಿ ರೆಸಾರ್ಟ್‌ಗಳಿಗಾಗಿ ಜಾಹೀರಾತುಗಳನ್ನು ಚಿತ್ರೀಕರಿಸಿದರು. ಕೆಕೆಆರ್ ಪಂದ್ಯಗಳಲ್ಲಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 25 ಆಸನಗಳ ಕಾರ್ಪೊರೇಟ್ ಬಾಕ್ಸ್ ಸಹ ಸ್ಥಾಪನೆ ಮಾಡಲಾಗಿತ್ತು.

ಕೆಕೆಆರ್ ಮತ್ತು ರೋಸ್ ವ್ಯಾಲಿ ಗ್ರೂಪ್ ನಡುವಿನ ವಹಿವಾಟಿನ ಸ್ವರೂಪವನ್ನು ಕುರಿತಂತೆ ಇಡಿ ಅರ್ಥೈಸಿಕೊಳ್ಳಲು ಬಯಸಿದೆ.ರೋಸ್ ವ್ಯಾಲಿ ಹಗರಣವನ್ನು 2013ರಲ್ಲಿ ಬಹಿರಂಗಪಡಿಸಲಾಗಿದ್ದು ಈ ಗುಂಪು 27 ಕಂಪನಿಗಳಲ್ಲದೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರದ ಠೇವಣಿದಾರರಿಂದ 17,520 ಕೋಟಿ ರೂ. ಸಂಗ್ರಹಿಸಿದೆ.ಇನ್ನು ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ನೊಂದಿಗೆ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ, 2,300 ಕೋಟಿ ರೂ.ಗಳ ಮೌಲ್ಯದ ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ಜಮೀನು ಸೇರಿದಂತೆ ಆಸ್ತಿಗಳನ್ನು ಲಗತ್ತಿಸಿದೆ ತನಿಖೆಗೆ ಸಂಬಂಧಿಸಿದಂತೆ ಇದು ಈ ಹಿಂದೆ ಬಂಗಾಳಿ ಸೂಪರ್‌ಸ್ಟಾರ್ ಪ್ರಸೇನ್‌ಜಿತ್ ಚಟರ್ಜಿ ಮತ್ತು ಜನಪ್ರಿಯ ಬಂಗಾಳಿ ನಟಿ ರಿತುಪರ್ಣ  ಸೇನ್‌ಗುಪ್ತಾ ಅವರನ್ನು ಪ್ರಶ್ನಿಸಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com