ಮಾರುತಿ ಸುಜೂಕಿಯ 2 ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ!
ವಾಣಿಜ್ಯ
ಮಾರುತಿ ಸುಜೂಕಿಯ 2 ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ!
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಲಿಮಿಟೆಡ್ ದೇಶದ ಎರಡು ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಲಿಮಿಟೆಡ್ ದೇಶದ ಎರಡು ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಗುರುಗ್ರಾಮ, ಮನೇಸರ್ ಗಳಲ್ಲಿರುವ ಪ್ರಯಾಣಿಕ ವಿಭಾಗದ ಕಾರುಗಳ ಉತ್ಪಾದನಾ ಘಟಕಗಳನ್ನು ಸೆ.7-09 ರ ವರೆಗೆ ಸ್ಥಗಿತಗೊಳಿಸುತ್ತಿರುವುದಾಗಿ ಮಾರುತಿ ಸುಜೂಕಿ ಹೇಳಿದ್ದು ಈ ಎರಡೂ ದಿನಗಳನ್ನು ಉತ್ಪಾದನೆ ಇಲ್ಲದ ದಿನಗಳೆಂದು ಪರಿಗಣಿಸಿರುವುದಾಗಿ ಹೇಳಿದೆ.
ಸೆ.04 ರಂದು ಮಧ್ಯಾಹ್ನದ ವೇಳೆಗೆ ಮಾರುತಿ ಸುಜೂಕಿ ಸಂಸ್ಥೆಯ ಷೇರುಗಳು ಶೇ.2.36 ರಷ್ಟು ಇಳಿಕೆಯಾಗಿತ್ತು. ಆಗಸ್ಟ್ ನಲ್ಲಿ ಮಾರುತಿ ಸಂಸ್ಥೆಯ ವಾಹನಗಳ ಒಟ್ಟಾರೆ ಮಾರಾಟದಲ್ಲಿ ಶೇ.32 ರಷ್ಟು ಕಡಿಮೆಯಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ