ಹಣದ ಹರಿವಿನ ಬಿಕ್ಕಟ್ಟು ಇಲ್ಲ, ಆರ್ಥಿಕತೆ ಶೀಘ್ರವೇ ಸುಧಾರಣೆಗೊಳ್ಳಲಿದೆ: ನಿರ್ಮಲಾ ಸೀತಾರಾಮನ್

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಆರ್ಥಿಕತೆಯ ಅಭಿವೃದ್ದಿ ವೇಗ ಸುಧಾರಣೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜನರ ಬಳಕೆ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಬ್ಯಾಂಕುಗಳು ಸಾಲ ನೀಡುವ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಕಾರಣ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಆರ್ಥಿಕತೆಯ ಅಭಿವೃದ್ದಿ ವೇಗ ಸುಧಾರಣೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜನರ ಬಳಕೆ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಬ್ಯಾಂಕುಗಳು ಸಾಲ ನೀಡುವ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಕಾರಣ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕರ್‌ಗಳನ್ನು ಭೇಟಿಯಾದ ವಾರಗಳ ನಂತರ, ಹಣಕಾಸು ಸಚಿವರು ಖಾಸಗಿ ವಲಯದ ಸಾಲದಾತರು ಮತ್ತು ಹಣಕಾಸು ಸಂಸ್ಥೆಗಳ ಪ್ರಮುಖರೊಡನೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು "ನಾವು ಇಂದು ಯಾವುದೇ ಸಂಕಷ್ಟದ ಸ್ಥಿತಿ ಎದುರಿಸುತ್ತಿಲ್ಲ" ಎಂದಿದ್ದಾರೆ. ಸಾಲಗಳಿಗೆ ಸಾಕಷ್ಟು ಬೇಡಿಕೆ ಇದೆ. ಲಿಕ್ವಿಡಿಟಿ (ದ್ರವ್ಯತೆ) ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಆರ್ಥಿಕ ಕುಸಿತವು ಕಡಿಮೆಯಾಗಿದೆ ಎಂದ ಸಚಿವೆ ಮುಂಬರುವ ಹಬ್ಬದ ಋತು ಆರ್ಥಿಕತೆಯ ಮುನ್ನಡೆಗೆ ಕಾರಣವಾಗಲಿದೆ ಎಂದರು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಶೇಕಡಾ 5 ಕ್ಕೆ ಇಳಿದಿದೆ.ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಕುಸಿತವು "ಆವರ್ತಕ" ಮತ್ತು ಮುಂದಿನ ಒಂದು ಅಥವಾ ಎರಡು ತ್ರೈಮಾಸಿಕಗಳಲ್ಲಿ ಮತ್ತೆ ವಾಹನ ಮಾರಾಟ ಚೇತರಿಕೆಯಾಗಲಿದೆ ಎಂದು ಖಾಸಗಿ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಿಳಿಸಿವೆ ಎಂದು ಸಚಿವರು ಹೇಳಿದರು.ಪ್ರಯಾಣಿಕರ ವಾಹನ ಮಾರಾಟದಲ್ಲಿನ ಮಂದಗಿತಿಯ ಬಗೆಗೆ ಹೇಳಿದ ನಿರ್ಮಲಾ ಸೀತಾರಾಮನ್ ಇದು "ಇಮೋಷನ್" ಗೆ ಸಂಬಂಧಿಸಿದ ವಿಚಾರಮುಂದಿನ ದಿನಗಳಲ್ಲಿ ಸುಧಾರಿಸುತ್ತದೆ ಎಂದುದಿದ್ದಾರೆ.

ಸಾಲ ವಿತರಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಬ್ಬದ ಋತುವಿನಲ್ಲಿ  ದೇಶದಾದ್ಯಂತ 400 ಜಿಲ್ಲೆಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳುವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅಕ್ಟೋಬರ್ 3 ಮತ್ತು 7 ರ naDuve  ಮೊದಲ ಹಂತದಲ್ಲಿ 250 ಜಿಲ್ಲೆಗಳನ್ನು ಒಳಗೊಂಡು ಕಾರ್ಯಕ್ರಮ ನಡೆಯಲಿದೆ. ಇನ್ನು ಇಂತಹಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಖಾಸಗಿ ಬ್ಯಾಂಕುಗಳಿಗೆ ಸಹ ಆಹ್ವಾನಿಸಲಾಗಿದೆ.

ಸಭೆಯಲ್ಲಿ, ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಕೈಗೆಟುಕುವ ವಸತಿ ಅರ್ಹತೆಯ ಮಿತಿ( limit for affordable housing eligibility )ಯನ್ನು ಪ್ರಸ್ತುತ 45 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಸೂಚಿಸಿತು. ಕಾರ್ಪೊರೇಟ್ ತೆರಿಗೆ ಕಡಿತಕ್ಕೆ ಖಾಸಗಿ ಹೂಡಿಕೆದ`ಾರರು ಸ್ಪಂದಿಸುತ್ತಿದ್ದಾರೆ ಎಂದುಖ್ಯಾತ ಖಾಸಗಿ ಬ್ಯಾಂಕರ್ ಉದಯ್ ಕೊಟ್ಯಾಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com