ಆರ್ ಬಿಐಗೆ ಕೊನೆಗೂ ಸಿಕ್ಕಿತು ದೇಶದ ಆರ್ಥಿಕತೆ ಕುಸಿತಕ್ಕೆ ಕಾರಣ; ಅದರ ಪುನಶ್ಚೇತನ ಹೇಗೆ? 

ಇಷ್ಟು ಸಮಯಗಳ ಕಾಲ ಕತ್ತಲೆಯಲ್ಲಿ ಮುಳುಗಿದ್ದ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದೆ.

Published: 30th August 2019 10:07 AM  |   Last Updated: 30th August 2019 10:07 AM   |  A+A-


RBI

ಆರ್ ಬಿಐ

Posted By : Sumana Upadhyaya
Source : The New Indian Express

ಮುಂಬೈ: ಇಷ್ಟು ಸಮಯಗಳ ಕಾಲ ಕತ್ತಲೆಯಲ್ಲಿ ಮುಳುಗಿದ್ದ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದೆ.ಭಾರತದಲ್ಲಿ ಆರ್ಥಿಕ ಹಿಂಜರಿತಕ್ಕೆ ಏನು ಕಾರಣ ಎಂದು ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಂತೆ ಕಾಣುತ್ತಿದೆ. 


ಸದ್ಯ ಕಂಡುಬರುವ ಆರ್ಥಿಕ ಕುಸಿತ ಪುನರಾವರ್ತಿತವಾಗಿದ್ದು ಅದರಲ್ಲಿ ರಚನಾತ್ಮಕ ಸಮಸ್ಯೆಗಳಿದ್ದು ಅವುಗಳಿಗೆ ತಕ್ಷಣದ ಸುಧಾರಣೆ ಕಾಣಬೇಕಾಗಿದೆ ಎಂದು ಆರ್ ಬಿಐ ನಿನ್ನೆ ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಹಾಗಾದರೆ ಇದಕ್ಕೆ ಭಾರತ ಸಿದ್ದವಾಗಿದೆಯೇ ಎಂಬುದಕ್ಕೆ ಆರ್ ಬಿಐಯಲ್ಲಿ ಸದ್ಯಕ್ಕೆ ಉತ್ತರವಿಲ್ಲ.


ದೇಶದ ಉತ್ಪಾದನೆ, ವ್ಯಾಪಾರ, ನಿರ್ಮಾಣ, ಕೃಷಿ ಮತ್ತು ರಿಯಲ್ ಎಸ್ಟೇಟ್ ಗಳಲ್ಲಿ ಇಂದು ವಿಸ್ತಾರವಾದ ಪುನರಾವರ್ತಿತ ಆರ್ಥಿಕ ಹಿಂಜರಿತ ಕಂಡುಬರುತ್ತಿದೆ. ಭಾರತದ ಆರ್ಥಿಕತೆಯಲ್ಲಿ ಇಂದು ಹೂಡಿಕೆಯ ಅವಶ್ಯಕತೆಯಿದ್ದು ಗ್ರಾಹಕರ ಬೇಡಿಕೆಗಳು ಜಾಸ್ತಿಯಾಗಿದೆ. ಅವೆರಡೂ ಈಡೇರಿಕೆಯಾಗುತ್ತಿಲ್ಲ. ಕಳೆದ ಏಳು ವರ್ಷಗಳಲ್ಲಿ ಹೂಡಿಕೆಯ ಪ್ರಮಾಣ ದೇಶದಲ್ಲಿ ಶೇಕಡಾ 40ರಿಂದ 32ಕ್ಕೆ ಕುಸಿದಿದೆ, ಇದನ್ನು ಚೇತರಿಸಿಕೊಳ್ಳುವುದು ಮತ್ತು ಗ್ರಾಹಕರ ಅವಶ್ಯಕತೆಯ ಪೂರೈಕೆಯನ್ನು ಭರಿಸುವುದು ಸದ್ಯದ ಆದ್ಯತೆಯಾಗಿದೆ ಎಂದು ಆರ್ ಬಿಐ ಕಂಡುಹಿಡಿದಿದೆ.


ದೇಶದಲ್ಲಿ ವ್ಯಾಪಾರ ನಡೆಸಲು ಸುಲಭ ಅನುಕೂಲಕರ ವಾತಾವರಣ ಕಲ್ಪಿಸಬೇಕು, ಉತ್ಪಾದನೆ, ಭೂಮಿ ಮತ್ತು ಕಾರ್ಮಿಕರಲ್ಲಿ ಸುಧಾರಣೆ, ಉನ್ನತ ಮಟ್ಟದ ವ್ಯಾಪಾರ ಸೌಲಭ್ಯ, ಸಾರ್ವಜನಿಕ ಅಧಿಕಾರಿಗಳಿಂದ ಹಣದ ವೆಚ್ಚಕ್ಕೆ ನೀತಿಗಳ ವೇಗ ಜಾರಿ, ಬೆಳವಣಿಗೆಯಲ್ಲಿ ಆರ್ಥಿಕತೆಯನ್ನು ಒಳಪಡಿಸುವ ಸಾಮರ್ಥ್ಯ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.


ಹೂಡಿಕೆ ಮತ್ತು ಬೇಡಿಕೆಯನ್ನು ಮತ್ತೆ ಮೇಲೆತ್ತುವುದು ಹೇಗೆ?: ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ವಲಯಗಳನ್ನು ಬಲಪಡಿಸುವುದರಿಂದ, ಮೂಲಭೂತಸೌಕರ್ಯಗಳು ಮತ್ತು ಕಾರ್ಮಿಕ ಕಾನೂನು, ತೆರಿಗೆ ಮತ್ತು ಇತರ ಕಾನೂನು ಸುಧಾರಣೆಗಳಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರುವ ಮೂಲಕ ಭಾರತ 2024-25ರಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಕನಸನ್ನು ಈಡೇರಿಸಲು ದೇಶದಲ್ಲಿ ಉದ್ಯಮವನ್ನು ವಿಸ್ತರಿಸಲು ಸಾಧ್ಯವಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp