ಮೊಬೈಲ್ ಬಳಕೆದಾರರಿಗೆ ಕಹಿಸುದ್ದಿ! ವೊಡಾಫೋನ್ ಐಡಿಯಾ ಕರೆದರಗಳಲ್ಲಿ ಶೀಘ್ರದಲ್ಲೇ ಏರಿಕೆ

ವೊಡಾಫೋನ್ ಐಡಿಯಾ ನೆಟ್ ವರ್ಕ್ ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ! ಡಿಸೆಂಬರ್ 1ರಿಂದ ನಿಮ್ಮ ಕರೆ ದರಗಳು ಹೆಚ್ಚಳವಾಗಲಿದೆ. ಡಿ. 1ರಿಂದ ಗ್ರಾಹಕರ ಕರೆ ದ್ರಗಳಲ್ಲಿ  ಸೂಕ್ತವಾದ ಹೆಚ್ಚಳ ಮಾಡುವುದಾಗಿ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಸೋಮವಾರ ಹೇಳಿಕೆ ನೀಡಿದೆ.
ವೊಡಾಫೋನ್ ಐಡಿಯಾ
ವೊಡಾಫೋನ್ ಐಡಿಯಾ
Updated on

ನವದೆಹಲಿ: ವೊಡಾಫೋನ್ ಐಡಿಯಾ ನೆಟ್ ವರ್ಕ್ ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ! ಡಿಸೆಂಬರ್ 1ರಿಂದ ನಿಮ್ಮ ಕರೆ ದರಗಳು ಹೆಚ್ಚಳವಾಗಲಿದೆ. ಡಿ. 1ರಿಂದ ಗ್ರಾಹಕರ ಕರೆ ದ್ರಗಳಲ್ಲಿ  ಸೂಕ್ತವಾದ ಹೆಚ್ಚಳ ಮಾಡುವುದಾಗಿ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಸೋಮವಾರ ಹೇಳಿಕೆ ನೀಡಿದೆ.

"ಟೆಲಿಕಾಂ ವಲಯದಲ್ಲಿನ ತೀವ್ರ ಆರ್ಥಿಕ ಒತ್ತಡವನ್ನು ಎಲ್ಲಾ ಪಾಲುದಾರರು ಒಪ್ಪಿಕೊಂಡಿದ್ದಾರೆ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಕಾರ್ಯದರ್ಶಿಗಳ ಸಮಿತಿ (ಸಿಒಎಸ್) ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ಪರಿಶೀಲಿಸುತ್ತಿದೆ" ಎಂದಿರುವ ಸಂಸ್ಥೆ ಮೊಬೈಲ್ ಡೇಟಾ ಸೇವೆಗಳ ಬೇಡಿಕೆ ವೇಗವಾಗಿ ಬೆಳೆಯುತ್ತಿರುವಾಗಲೂ ಭಾರತದಲ್ಲಿ ಮೊಬೈಲ್ ಡೇಟಾ ಶುಲ್ಕಗಳು ವಿಶ್ವದಲ್ಲೇ ಅಗ್ಗವಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ದ್ವಿತೀಯ ತ್ರೈಮಾಸಿಕದಲ್ಲಿ  ಒಟ್ಟು 74,000 ಕೋಟಿ ರೂ ನಷ್ಟ ಅನುಭವಿಸಿರುವುದಾಗಿ ಹೇಳಲಾಗಿದೆ. ಒಂದೊಮ್ಮೆ ಟೆಲಿಕಾಂ ವಲಯಕ್ಕೆ ಪರಿಹಾರ ಹರಿದುಬರದೆ ಹೋದಲ್ಲಿ ಮುಂದೆ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ವೊಡಾಫೋನ್ ಸುಳಿವು ನೀಡಿದೆ.

ವಿಐಎಲ್ ತನ್ನ ವ್ಯಾಪ್ತಿ ಮತ್ತು ಸಾಮರ್ಥ್ಯ ಎರಡನ್ನೂ ಶೀಘ್ರವಾಗಿ ವಿಸ್ತರಿಸುತ್ತಿದೆ ಮತ್ತು ಮಾರ್ಚ್ 2020 ರ ವೇಳೆಗೆ 1 ಬಿಲಿಯನ್ ಭಾರತೀಯ ನಾಗರಿಕರಿಗೆ 4ಜಿ ಸೇವೆಗಳನ್ನು ಒದಗಿಸುವ ಹಾದಿಯಲ್ಲಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com