ಉತ್ಪಾದನ ವಲಯದ ಕಳಪೆ ಸಾಧನೆ: ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇ. 1.1ರಷ್ಟು ಕುಸಿತ

ಉತ್ಪಾದನೆ,ಕ್ಷೇತ್ರ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 1.1 ರಷ್ಟು ಕುಸಿದಿದೆ 
 

Published: 11th October 2019 07:33 PM  |   Last Updated: 11th October 2019 07:33 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ಉತ್ಪಾದನೆ,ಕ್ಷೇತ್ರ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 1.1 ರಷ್ಟು ಕುಸಿದಿದೆ 

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಆಗಸ್ಟ್ 2018 ರಲ್ಲಿ ಶೇಕಡಾ 4.8 ರಷ್ಟು ತಲುಪಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಐಐಪಿಗೆ ಶೇಕಡಾ 77 ಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಉತ್ಪಾದನಾ ವಲಯವು ಆಗಸ್ಟ್ 2019 ರಲ್ಲಿ ಉತ್ಪಾದನೆಯಲ್ಲಿ ಶೇಕಡಾ 1.2 ರಷ್ಟು ಕುಸಿದಿದೆ.ಕಳೆದ ವರ್ಷದ ಇದೇ ತಿಂಗಳಲ್ಲಿ ಇದು 5.2 ಶೇಕಡಾ ಬೆಳವಣಿಗೆ ಸಾಧಿಸಿತ್ತು. 

ವಿದ್ಯುತ್ ಉತ್ಪಾದನೆಯು ಶೇಕಡಾ 0.9 ರಷ್ಟು ಕುಸಿದಿದ್ದು, ಹಿಂದಿನ ವರ್ಷಶೇಕಡಾ 7.6 ರಷ್ಟು ಬೆಳವಣಿಗೆಯಾಗಿತ್ತು.. ಗಣಿಗಾರಿಕೆ ಕ್ಷೇತ್ರದ ಬೆಳವಣಿಗೆ ಶೇ 0.1ರಷ್ಟು ಕುಸಿತ ಕಂಡಿದೆ.

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಒಟ್ಟಾರೆ ಐಐಪಿ ಬೆಳವಣಿಗೆಯು ಶೇಕಡಾ 2.4 ರಷ್ಟಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 5.3 ಶೇಕಡಕ್ಕಿಂತ ಇದು ಕಡಿಮೆ ಪ್ರಮಾಣವಾಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp