ವಿಜಯ್ ಮಲ್ಯಗೆ ತಾತ್ಕಾಲಿಕ ರಿಲೀಫ್ ನೀಡಿದ ಯುಕೆ ಹೈಕೋರ್ಟ್: ದಿವಾಳಿತನ ಆದೇಶ ಮುಂದೂಡಿಕೆ

ಮದ್ಯದ ದೊರೆ ವಿಜಯ್ ಮಲ್ಯಗೆ  ಲಂಡನ್‌ನ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟದ ಮನವಿಯ ಹಿನ್ನೆಲೆ ವಿಚಾರಣೆ ನಡೆಸಿದ ಲಂಡನ್‌ನ ಹೈಕೋರ್ಟ್ ದಿವಾಳಿತನ ಆದೇಶವನ್ನು ಮುಂದೂಡಿದೆ,
ವಿಜಯ್ ಮಲ್ಯ
ವಿಜಯ್ ಮಲ್ಯ
Updated on

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯಗೆ  ಲಂಡನ್‌ನ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಎಸ್‌ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟದ ಮನವಿಯ ಹಿನ್ನೆಲೆ ವಿಚಾರಣೆ ನಡೆಸಿದ ಲಂಡನ್‌ನ ಹೈಕೋರ್ಟ್ ದಿವಾಳಿತನ ಆದೇಶವನ್ನು ಮುಂದೂಡಿದೆ,

ಹೈಕೋರ್ಟಿನ  ದಿವಾಳಿತನ ವಿಭಾಗದ ನ್ಯಾಯಮೂರ್ತಿ ಮೈಕೆಲ್ ಬ್ರಿಗ್ಸ್ ಅವರು ಮಲ್ಯಗೆ ಈ ಪರಿಹಾರ ಒದಗಿಸಿದ್ದಾರೆ.ಅವರು ಭಾರತದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳು ಮತ್ತು ಕರ್ನಾಟಕ ಹೈಕೋರ್ಟ್‌ನ ಮುಂದೆ ಇರುವ ಅರ್ಜಿಗಳ ಇತ್ಯರ್ಥವಾಗುವವರೆಗೆ ಅವರಿಗೆ ಸಾಲ ಮರುಪಾವತಿಗೆ  ಸಮಯ ನೀಡಬೇಕು ಎಂದು ತೀರ್ಪು ನೀಡಿದ್ದಾರೆ. ಮುಖ್ಯ ದಿವಾಳಿತನ ಮತ್ತು ಕಂಪನಿ ನ್ಯಾಯಾಲಯದ ನ್ಯಾಯಾಧೀಶ ಬ್ರಿಗ್ಸ್ ಅವರು ಗುರುವಾರ ನೀಡಿದ ತೀರ್ಪಿನಲ್ಲಿ, ಈ ಸಮಯದಲ್ಲಿ ಈ ವರ್ಗದ ಕ್ರಮವನ್ನು ಮುಂದುವರಿಸಲು ಬ್ಯಾಂಕುಗಳಿಗೆ ಯಾವುದೇ ಸ್ಪಷ್ಟ ಉಪಯೋಗವಾಗುವುದಿಲ್ಲ ಎಂದಿದ್ದಾರೆ.

"ಈ ದಿವಾಳಿತನದ ಅರ್ಜಿಯು ಯಾವುದೇ ಮಾನದಂಡವನ್ನು  ಮೀರಿದ್ದಾಗಿದೆ. ಭಾರತದಲ್ಲಿ  ವಿಚಾರಣೆಗಳು ನಡೆಯುತ್ತಿರುವ ಸಮಯದಲ್ಲಿ ಬ್ಯಾಂಕುಗಳು ದಿವಾಳಿತನದ ಆದೇಶಕ್ಕಾಗಿ ಒತ್ತಾಯಿಸುತ್ತಿವೆ" 

"ನನ್ನ ತೀರ್ಪಿನ ಕುರಿತು ಹೇಳುವುದಾದರೆ ಬ್ಯಾಂಕುಗಳು ಭಾಗಶಃ ಸುರಕ್ಷಿತವಾಗಿವೆ. ಅರ್ಜಿಯ ವಿಚಾರಣೆ ಉದ್ದೇಶದಿಂದ ಸಾಲಗಳನ್ನು ಪೂರ್ಣವಾಗಿ ಪಾವತಿಸುವ ಸಮಯವನ್ನು ವಿಸ್ತರಿಸಬೇಕು" ನ್ಯಾಯಾಧೀಶರು ಹೇಳಿದ್ದಾರೆ.

ಮಲ್ಯ ಅವರಿಂದ 1.145 ಬಿಲಿಯನ್ ಸಾಲವನ್ನು ಮರುಪಾವತಿಸುವ ಪ್ರಯತ್ನಗಳ ಭಾಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟವು ಮಲ್ಯ ವಿರುದ್ಧ ದಿವಾಳಿತನದ ಆದೇಶವನ್ನು ಕೋರಿತ್ತು ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಾಲಗಳ ಕುರಿತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಎರಡೂ ಕಡೆಯಿಂದ ವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶ ಬ್ರಿಗ್ಸ್ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com