
ಮುಂಬೈ: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದು ಸಂಸ್ಥೆಗೆ ಸಾಕಷ್ಟು ನಷ್ಟವಾಗಿರುವ ಕಾರಣ ಏರ್‌ಏಷ್ಯಾ ಇಂಡಿಯಾ ತನ್ನ ಸಿಬ್ಬಂದಿಯ ಏಪ್ರಿಲ್ ವೇತನದಲ್ಲಿ ಶೇ. 20 ರಷ್ಟು ಕಡಿತಗೊಳಿಸಿದೆ ಎಂದು ಮೂಲವೊಂದು ತಿಳಿಸಿದೆ
ಆದರೆ ತಿಂಗಳಿಗೆ 50,000 ರೂ ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ಇದು ಅನ್ವಯವಾಗುವುದಿಲ್ಲ. ಬೆಂಗಳುರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆ ಬೇರೆಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳ ಮಾದರಿಯನ್ನೇ ಅನುಸರಿಸಿದೆ.ದೇಶದ ಇತರೆ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಸ್ಪೈಸ್ ಜೆಟ್ ಮತ್ತು ವಿಸ್ತಾರ ಸಹ ತಮ್ಮ ಸಿಬ್ಬಂದಿಯ ವೇತನಗಳಲ್ಲಿ ಕೆಲ ಮಟ್ಟಿನ ಕಡಿತ ಮಾಡಿದೆ.
"ಉನ್ನತ ಆಡಳಿತವು ಶೇಕಡಾ 20 ರಷ್ಟು ವೇತನ ಕಡಿತ ನಿರ್ಧಾರ ತೆಗೆದುಕೊಳ್ಳುತ್ತದೆ.ಇತರ ವಿಭಾಗಗಳಲ್ಲಿ ಬರುವ ಅಧಿಕಾರಿಗಳ ವೇತನವನ್ನು ಕ್ರಮವಾಗಿ ಶೇಕಡಾ 17, 13 ಮತ್ತು 7 ರಷ್ಟು ಕಡಿಮೆ ಮಾಡಲಾಗಿದೆ" ಎಂದು ತಮ್ಮ ಹೆಸರು ಬಹಿರಂಗಪಡಿಸದಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಆದರೆ, ತಿಂಗಳಿಗೆ 50,000 ರೂ ಅಥವಾ ಅದಕ್ಕಿಂತ ಕಡಿಮೆ ಆದಾಯ ಗಳಿಸುವ ನೌಕರರಿಗೆ ಈಗಿನವರೆಗೆ ಯಾವುದೇ ವೇತನ ಕಡಿತ ಮಾಡಲಾಗಿಲ್ಲ.ಈ ಸಂಬಂಧ ಏರ್ ಏಷ್ಯಾ ಇಂಡಿಯಾ ವಕ್ತಾರರನ್ನು ಸಂಪರ್ಕಿಸಿದಾಗ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
Advertisement