ಕೊರೋನಾ ವೈರಸ್ ಎಫೆಕ್ಟ್: ಇತಿಹಾಸದಲ್ಲಿ ಮೊದಲ ಬಾರಿಗೆ ಕಚ್ಚಾತೈಲ ಬೆಲೆ ಕುಸಿತ, ಬ್ಯಾರಲ್ ಗೆ 37.63 ಡಾಲರ್!

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್(ಡಬ್ಲ್ಯುಟಿಐ)ಕಚ್ಚಾ ತೈಲ ಬೆಲೆ ತೀವ್ರ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್/ಸಿಂಗಾಪುರ್ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್(ಡಬ್ಲ್ಯುಟಿಐ)ಕಚ್ಚಾ ತೈಲ ಬೆಲೆ ತೀವ್ರ ಪ್ರಮಾಣದಲ್ಲಿ ಇಳಿಮುಖವಾಗಿದೆ. ಪೂರೈಕೆಯಲ್ಲಿ ವ್ಯತ್ಯಯ ಮತ್ತು ಕೊರೋನಾ ವೈರಸ್ ನಿಂದಾಗಿ ಬೇಡಿಕೆ ಕಡಿಮೆಯಾಗಿರುವುದರಿಂದ ವೆಸ್ಟ್ ಟೆಕ್ಸಾಸ್ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ.

ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾತೈಲ ಬೆಲೆ ನಿನ್ನೆ ಪ್ರತಿ ಬ್ಯಾರಲ್ ಗೆ 37.63 ಡಾಲರ್ ಗೆ ಇಳಿಕೆಯಾಗಿದೆ. ಗುತ್ತಿಗೆದಾರರು ಕಚ್ಚಾತೈಲದ ಖರೀದಿದಾರರು ಇಲ್ಲದೆ ಪರಿತಪಿಸುತ್ತಿದ್ದಾರೆ. ವೆಸ್ಟ್ ಟೆಕ್ಸಾಸ್ ಕಚ್ಚಾತೈಲ ಜೂನ್ ತಿಂಗಳ ಗುತ್ತಿಗೆ ಪ್ರತಿ ಬ್ಯಾರಲ್ ಗೆ 22 ಡಾಲರ್ ಆಗಿದೆ.

ಮೇ ತಿಂಗಳ ಗುತ್ತಿಗೆ ಅವಧಿ ಇಂದಿಗೆ ಮುಕ್ತಾಯವಾಗುವುದರಿಂದ ಕಚ್ಚಾತೈಲವನ್ನು ಲಾಭಕ್ಕೆ ಖರೀದಿಸಿ ಮಾರಾಟ ಮಾಡುವ ಗುತ್ತಿಗೆದಾರರಿಗೆ ಅದನ್ನು ಸಂಗ್ರಹಿಸಿಟ್ಟುಕೊಳ್ಳುವವರು ಸಿಗಬೇಕಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಮತ್ತು ಸಂಗ್ರಹಿಸಿಟ್ಟುಕೊಂಡಿರುವುದು ಈಗಾಗಲೇ ಭರ್ತಿಯಾಗಿರುವುದರಿಂದ ಖರೀದಿಸುವವರು ಆತಂಕದಲ್ಲಿದ್ದಾರೆ.

ಜೂನ್ ತಿಂಗಳ ಗುತ್ತಿಗೆ ಮೇಲೆ ಕಚ್ಚಾತೈಲ ವ್ಯಾಪಾರಿಗಳು ಇದೀಗ ಗಮನ ಹರಿಸುತ್ತಿದ್ದಾರೆ. ಇಂದು ಮಂಗಳವಾರ ಕಚ್ಚಾತೈಲ ಬೆಲೆ ಸ್ವಲ್ಪ ಏರಿಕೆಯಾಗಿದ್ದು ಪ್ರತಿ ಬ್ಯಾರಲ್ ಗೆ 21 ಡಾಲರ್ ಆಗಿದ್ದು ನ್ಯೂಯಾರ್ಕ್ ನಲ್ಲಿ ನಿನ್ನೆ ಪ್ರತಿ ಬ್ಯಾರಲ್ ಗೆ 20.43 ಡಾಲರ್ ಆಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲ ಬೆಲೆ ಜೂನ್ ತಿಂಗಳಿಗೆ ಬ್ಯಾರಲ್ ಗೆ 25.61 ಡಾಲರ್ ಆಗಿದ್ದು ಶೇಕಡಾ 0.15ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com