ಲಾಕ್‌ಡೌನ್‌: 15 ದಿನಗಳಲ್ಲಿ 6 ಲಕ್ಷ ಖಾರ್ಮಿಕರಿಂದ ಇಪಿಎಫ್ ಖಾತೆ ಹಣ ವಿತ್ ಡ್ರಾ

ಲಾಕ್‌ಡೌನ್‌ನಿಂದಾಗಿ ಕಾರ್ಮಿಕ ವರ್ಗದವರು ಅನುಭವಿಸುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಇದೇ ಕಾರಣಕ್ಕೆ ಆರು ಲಕ್ಷಕ್ಕೂ ಹೆಚ್ಚು ಕಾರ್ಮಿಕರುಇಪಿಎಫ್ ಖಾತೆಗಳಿಂದ ಮೂರು ತಿಂಗಳ ಮೂಲ ವೇತನವನ್ನು ಮುಂಚಿತವಾಗಿ ಹಿಂತೆಗೆದುಕೊಂಡಿದ್ದಾರೆ ಯೋಜನೆ ಜಾರಿಗೆ ಬಂದ  15 ದಿನಗಳಲ್ಲಿ 1,954 ಕೋಟಿ ರೂ. ಹಿಂಪಡೆಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಕಾರ್ಮಿಕ ವರ್ಗದವರು ಅನುಭವಿಸುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಇದೇ ಕಾರಣಕ್ಕೆ ಆರು ಲಕ್ಷಕ್ಕೂ ಹೆಚ್ಚು ಕಾರ್ಮಿಕರುಇಪಿಎಫ್ ಖಾತೆಗಳಿಂದ ಮೂರು ತಿಂಗಳ ಮೂಲ ವೇತನವನ್ನು ಮುಂಚಿತವಾಗಿ ಹಿಂತೆಗೆದುಕೊಂಡಿದ್ದಾರೆ ಯೋಜನೆ ಜಾರಿಗೆ ಬಂದ  15 ದಿನಗಳಲ್ಲಿ 1,954 ಕೋಟಿ ರೂ. ಹಿಂಪಡೆಯಲಾಗಿದೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟನ್ನು  ಎದುರಿಸಲು ನಾಗರಿಕರಿಗೆ ಸಹಾಯವಾಗಲೆಂದು ಕಳೆದ ತಿಂಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಹಲವಾರು ಕ್ರಮಗಳನ್ನು ಘೋಷಿಸಿದ್ದರು.ಇಪಿಎಫ್ ಖಾತೆಗಳಿಂದ ಮೂರು ತಿಂಗಳ ಮೂಲ ವೇತನವನ್ನು ಮುಂಗಡವಾಗಿ ಹಿಂಪಡೆಯಲು ಅವಕಾಶ ಇದರಲ್ಲಿ ಒಂದಾಗಿದೆ.

ಒಟ್ಟು 10.2 ಲಕ್ಷ ಕ್ಲೈಮ್‌ ಗಳಲ್ಲಿ  6.06 ಲಕ್ಷ ಕ್ಲೈಮ್‌ ಗಳು ಕೊರೋನಾ ಲಾಕ್‌ಡೌನ್‌ಗೆ ಸಂಬಂಧಿಸಿವೆ  ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ."ಟ್ಟು 3,600.85 ಕೋಟಿ ರೂ.ಗಳ ವಿತರಣೆಯ ಪೈಕಿ 1,954 ಕೋಟಿ ರೂ. ಕೋವಿಡ್ ಗೆ ಸಂಬಂಧಿಸಿದ್ದಾಗಿದೆ."

ಪಿಎಂಜಿಕೆವೈ ಅಡಿಯಲ್ಲಿನ ಹೊಸ ನಿಬಂಧನೆಯು ಮೂರು ತಿಂಗಳವರೆಗೆ ಮೂಲ ವೇತನ ಮತ್ತು ಭತ್ಯೆಯ ಮಟ್ಟಕ್ಕೆ ಮರುಪಾವತಿಸಲಾಗದ ಹಿಂಪಡೆಯುವಿಕೆಯನ್ನು ಒದಗಿಸುತ್ತದೆ ಅಥವಾ ಇಪಿಎಫ್ ಖಾತೆಯಲ್ಲಿ ಸದಸ್ಯರ ಸಾಲದ ಮೊತ್ತದ ಶೇಕಡಾ 75 ರಷ್ಟು(ಯಾವುದು ಕಡಿಮೆಯೋ ಅದು) ವಿಳಂಬ ಅಥವಾ ಸಂಬಳವನ್ನು ಪಾವತಿಸದ ಕಾರಣ ಹೆಚ್ಚಿನ ಜನರು ಹಣವನ್ನು ಹಿಂಪಡೆಯಲು ಬಯಸುತ್ತಾರೆ.

"ಲಾಕ್ ಡೌನ್ ಸಮಯದಲ್ಲಿ ವೇತನವನ್ನು ಕಡಿತಗೊಳಿಸಬೇಡಿ ಮತ್ತು ಉದ್ಯೋಗದಿಂದ ಹೊರಹಾಕಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗದಾತರಿಗೆ ಪದೇ ಪದೇ ಮನವಿ ಮಾಡಿದರೂ, ಅನೇಕ ಕಂಪನಿಗಳು ಅದನ್ನು ಪಾಲಿಸಲಿಲ್ಲ. ಹಣವನ್ನು ಹಿಂಪಡೆಯಲು ಕಾರಣವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗದಿದ್ದರೂ, ಇದು ಅತ್ಯಂತ ವಾಸ್ತವಿಕವಾದದ್ದು ಎಂದು ತೋರುತ್ತದೆ, ”ಎಂದು ಕಾರ್ಮಿಕ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‌ಜಿಒ ಸೊಸೈಟಿ ಆಫ್ ಲೇಬರ್ ಅಂಡ್ ಡೆವಲಪ್‌ಮೆಂಟ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com