ಐಸಿಐಸಿಐ ಬ್ಯಾಂಕ್ ನಲ್ಲಿ ಚೀನಾದಿಂದ 15 ಕೋಟಿ ರೂಪಾಯಿ ಹೂಡಿಕೆ 

ಐಸಿಐಸಿಐ ಬ್ಯಾಂಕ್ ನಲ್ಲಿ ಚೀನಾ ಬರೊಬ್ಬರಿ 15 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. 
ಐಸಿಐಸಿಐ ಬ್ಯಾಂಕ್ ನಲ್ಲಿ ಚೀನಾದಿಂದ 15 ಕೋಟಿ ರೂಪಾಯಿ ಹೂಡಿಕೆ
ಐಸಿಐಸಿಐ ಬ್ಯಾಂಕ್ ನಲ್ಲಿ ಚೀನಾದಿಂದ 15 ಕೋಟಿ ರೂಪಾಯಿ ಹೂಡಿಕೆ
Updated on

ನವದೆಲಿ: ಐಸಿಐಸಿಐ ಬ್ಯಾಂಕ್ ನಲ್ಲಿ ಚೀನಾ ಬರೊಬ್ಬರಿ 15 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. 

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಐಸಿಐಸಿಐ ನಲ್ಲಿ ಶೇ.0.006 ರಷ್ಟು ಪಾಲನ್ನು ಕ್ಯುಐಪಿ ಮೂಲಕ ಖರೀದಿಸಿದೆ. 

357 ಸಾಂಸ್ಥಿಕ ಹೂಡಿಕೆದಾರರ ಪೈಕಿ ಚೀನಾದ ಬ್ಯಾಂಕ್ ಕೂಡ ಒಂದಾಗಿದ್ದು, ದೇಶಿ ಮ್ಯುಚ್ಯುಯಲ್ ಫಂಡ್ಸ್, ಇನ್ಶ್ಯೂರೆನ್ಸ್ ಕಂಪನಿಗಳು, ಜಾಗತಿಕ ಸಂಸ್ಥೆಗಳು ಐಸಿಐಸಿಐ ನಲ್ಲಿ ಹೂಡಿಕೆ ಮಾಡಿವೆ. ಈ ಪೈಕಿ ಸಿಂಗಾಪೂರ್ ಸರ್ಕಾರ, ಮಾರ್ಗನ್ ಇನ್ವೆಸ್ಟ್ಮೆಂಟ್& ಸೊಸೈಟ್ ಜನರಲ್ ಪ್ರಮುಖ ಹೂಡಿಕೆದಾರರಾಗಿವೆ ಎನ್ನುತ್ತಿದೆ ನಿಯಂತ್ರಕ ಸಂಸ್ಥೆಗಳು ನೀಡಿರುವ ಮಾಹಿತಿ 

ಮಾರ್ಚ್ ತಿಂಗಳಲ್ಲಿ ಚೀನಾ ಬ್ಯಾಂಕ್ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಶೇ.1 ರಷ್ಟು ಷೇರುಗಳನ್ನು ಖರೀದಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com